Thursday, 20 September 2012

ಆಕ್ರಮ ಮರಳು ಸಾಗಣಿಕೆ



                    ವರದಿ :- ಎಂ.ಡಿ.ಉಮೇಶ್.ಮಳವಳ್ಳಿ.


ಮರಳು ನೀತಿ ಜಾರಿಗೊಳಿಸಿ ಆಕ್ರಮ ಮರಳು ದಂದೆ ಕೋರರಿಗೆ ಕಡಿವಾಣ ಹಾಕಲು ಕಾನೂನು ವ್ಯಾಪ್ತಿಯೊಳಗೆ ಕ್ರಮ ಕೈಗೊಂಡಿದ್ದರು ಸಹ ಆಕ್ರಮ ಮರಳು ಸಾಗಣಿಕೆಗಾರರು ಖಾಸಗಿ ಕಾರಿಡರ್
ರಸ್ತೆ ನಿಮಿ೯ಸಿಕೊಂಡು ಮರಳು ಸಾಗಾಣಿಕೆಗೆ ಮುಂದಾಗಿರುವುದು ಪ್ರತ್ಯಕ್ಷ ಸಾಕ್ಷಿಯಾಗಿದೆ .

ತಾಲೂಕಿನ ಉಲ್ಲಂಬಳ್ಳಿ ಗ್ರಾಮದಿಂದ ಕಾವೇರಿ ನದಿಗೆ ತೆರಳುವ ಗದ್ದೆ ಮಾಗ೯ದ ರಸ್ತೆಯಲ್ಲಿ ಆಕ್ರಮ ಮರಳು ಸಾಗಣಿಕೆಗೆ ಖಾಸಗಿಯಾಗಿ ರಸ್ತೆ ನಿಮಿ೯ಸಿ ಕೊಳ್ಳುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಹೆಡೆಮಾಡಿದೆ  ಈ ಭಾಗದಲ್ಲಿ  ಅತಿಭಾರ ಹೊತ್ತ ಮರಳು ಲಾರಿಗಳ ಸಂಚಾರದಿಂದ ಗದ್ದೆಗಳಿಗೆ ಸಂಪಕ೯ ಕಲ್ಪಿಸಿರುವ ನೀರಿನ ಪೈಪುಗಳು ಹಾಳಾಗಿದ್ದು ಗದ್ದೆಗಳಿಗೆ ನೀರು ಬರುತ್ತಿಲ್ಲ , ಲಾರಿಗಳ ಸಂಚಾರದಿಂದ ಬೆಳೆಗಳು ಹಾಳಾಗುತ್ತಿದೆ,  ಗ್ರಾಮೀಣ ಕೖಷಿಕ ರೈತರ ಕೖಷಿ ಚಟುವಟಿಕೆಗಳ ರಸ್ತೆ ಹಾಳಾಗಿದ್ದು ರೈತ ಬೆಳೆದ ಬೆಳೆಯು ಸಹ ಹಾಳಾಗುತ್ತಿದೆ ಎಂದು ರೈತರು ದೂರಿದ್ದಾರೆ .

ತಾಲೂಕಿನ ಗಡಿಭಾಗವಾದ ಉಲ್ಲಂಬಳ್ಳಿ ಯಿಂದ ಅನತಿ ದೂರದಲ್ಲಿಯೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಮರಳು ಸಾಗಣಿಕೆಗಾರರು ಹಾಗೂ ಮಳವಳ್ಳಿ ಭಾಗದವರು  ಈ ಆಕ್ರಮ ರಸ್ತೆ ನಿಮಿ೯ಸುವಲ್ಲಿ ಮುಂದಾಗಿದ್ದು  ಟಿ.ನರಸೀಪುರ ಗಡಿಭಾಗದಿಂದ ಮರಳನ್ನು ತುಂಬಿ ತಾಲೂಕಿನ ಉಲ್ಲಂಬಳ್ಳಿ ಜಮೀನುಗಳಲ್ಲಿ ಶೇಖರಿಸಿ ಅಧಿಕಾರಿಗಳಿಗೆ ಚೆಳ್ಳೇ ಹಣ್ಣು ತಿನ್ನಿಸುವ ಅಂಶ ಬೆಳಕಿಗೆ ಬಂದಿದೆ .

ಅಲ್ಲದೆ ಪ್ರಭಾವಿ ರಾಜಕಾರಣಿಗಳು ಹಾಗೂ ಬಂಡವಾಳ ಶಾಯಿಗಳು  ಮರಳು ಟೆಂಡರ್ ದಾರರಿಗೆ ಬೆಂಗಾವಲಾಗಿ ನಿಂತು ಮರಳು ತುಂಬಿಸುತಿದ್ದು ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ .

ಮರಳು ಸಾಗಣಿಕೆಗೆ ಟೆಂಡರ್ ನಡೆದು ಮರಳು ನೀತಿ ಜಾರಿಗೊಳಿಸಿ ಮರಳು ಸಾಗಣಿಕೆಗೆ ತೊಂದರೆಯಾಗದಂತೆ ಪರವಾನಿಗೆ ನೀಡಿದರು ಸಹ ಆಕ್ರಮ ರಸ್ತೆಗಳು ಏಕೆ ತಲೆಯೆತ್ತಿನಿಂತಿವೆ  ಎಂದರೆ ಪರವಾನಿಗೆಯ ಲಾರಿ ಜೊತೆ ಅನಧಿಕೖತ ಪರವಾನಿಗೆಯಿಲ್ಲದ ಮರಳು ಲಾರಿಗಳನ್ನ ಜೊತೆಯಲ್ಲಿ ಸಾಗಿಸುವ ಸಲುವಾಗಿಯೇ ಈ ನಿರಂತರ ದಂಧೆಗೆ ಮುಗಿಬಿದ್ದಿರುವ ಬಂಡವಾಳ ಶಾಯಿಗಳು ಕಾನೂನಿನ ಕ್ರಮವನ್ನು ಸಹ ಲೆಕ್ಕಿಸದೆ ಮರಳು ದಂಧೆಯನ್ನ ಹಿಡಿತದಲ್ಲಿಟ್ಟು ಕೊಂಡಿರುವ ರಾಜಕಾರಣಿಗಳು ಕಾವೇರಿ ನದಿಪಾತ್ರದಲ್ಲಿ ಮರಳೆತ್ತುವವರಿಂದ ಕಡಿಮೆ ಬೆಲೆಗೆ 3 ರಿಂದ 4ಸಾವಿರಕ್ಕೆ ಮರಳನ್ನು ಪಡೆದು ರಾಜ್ಯದ ರಾಜಧಾನಿಯಲ್ಲಿ  ಲಾರಿಯೊಂದಕ್ಕೆ 30 ರಿಂದ  40 ಸಾವಿರ ರೂಗಳಿಗೆ ಮಾರಾಟಮಾಡುತ್ತಿದ್ದಾರೆ .                                                                              

ಜಿಲ್ಲಾಡಳಿತ ಹಾಗೂ ರಾಜ್ಯ ಸಕಾ೯ರ ಜಾರಿಗೆ ತಂದ ಮರಳು ನೀತಿ ನೂತನ ಕಟ್ಟಡ ನಿಮಿ೯ಸಿ ಕೊಳ್ಳುವವರಿಗೆ ಒಂದಿಷ್ಟು ಪ್ರಯೊಜನಕ್ಕೆ  ಬಂದಿತ್ತಾದರೂ  ಸಾಗಣಿಕೆಗಾರರು  ಹಾಗೂ ಮರಳು ವ್ಯಾಪಾರವನ್ನು ವೖತ್ತಿ ಮಾಡಿಕೊಂಡಿರುವವರು ನಿಯಮಗಳನ್ನೆಲ್ಲ ಗಾಳಿಗೆ ತೂರಿ ಮನಬಂದಹಾಗೇ ದುಪ್ಪಟ್ಟು ಬೆಲೆಗೆ ಮಾರಟ ಮಾಡುತ್ತಿದ್ದಾರೆ , ತಾಲೂಕಿನಲ್ಲಿ  ಸಕಾ೯ರದಿಂದ ಅಧೀಕೖತವಾಗಿ ತಾಲೂಕು ಆಡಳಿತ ಮುಟ್ಟನಹಳ್ಳಿ ಹಾಗೂ ಪೂರಿಗಾಲಿಯಲ್ಲಿ ಕಾವೇರಿ ನದಿ ಪಾತ್ರದ ಮುಖ್ಯ ಸ್ಥಳಗಳಲ್ಲಿ ಮರಳು ದಾಸ್ತನು ಯಾಡ್೯ಗಳನ್ನ ನಿಮಿ೯ಸಿತ್ತಾದರು  ಈ ಯಾಡ್೯ಗಳಲ್ಲಿ ಮನೆಕಟ್ಟುವವರು ನೇರವಾಗಿ 7 ಸಾವಿರ ರೂ ಡಿಡಿ ಲೋಕೊಪಯೋಗಿ ಇಲಾಖೆಗೆ ಸಲ್ಲಿಸಿ 8 ಕ್ಯೂಬಿಕ್ ಮರಳನ್ನ  ಪಡೆಯ ಬಹುದಾಗಿದೆ .

ತಾಲೂಕಿನಲ್ಲಿ ಅಧೀಕೖತವಾಗಿ ನಿಮಿ೯ಸಿರುವ 2 ಮರಳು ಸಂಗ್ರಹಣಾ ಯಾಡ್೯ ಗಳನ್ನು ಹೊರತು ಪಡಿಸಿ ಬೇರೆಯಲ್ಲೂ ಮರಳನ್ನು ಮಾರಾಟ ಮಾಡಬಾರದು , ಅಧೀಕೖತ ಪರವಾನಗಿ ಇಲ್ಲದೆ ಮರಳನ್ನು ಕೊಂಡೊಯ್ಯುವಂತಿಲ್ಲ ಎಂಬ ನಿಯಮಗಳಿದ್ದರು ಒಂದಲ್ಲ ಒಂದು ರೀತಿಯಲ್ಲಿ ಅಧಿಕಾರಿಗಳ ಕಣ್ಣು ತಪ್ಪಿಸಿ ಪ್ರತ್ಯೆಕ ಯಾಡ್೯ಗಳನ್ನು ನಿಮಿ೯ಸಿಕೊಳ್ಳುತ್ತಿದ್ದಾರೆ ,  ಇಲ್ಲಿಯು ಸಹ ಮರಳು ವ್ಯಾಪಾರಿಗಳದ್ದೆ ಮೇಲುಗೈಯಾಗಿದೆ .

ಉಲ್ಲಂಬಳ್ಳಿ ಭಾಗದ ರೈತರ ಜಮೀನುಗಳ ರಸ್ತೆಯನ್ನ ಖಾಸಗಿ ಮರಳು ಸಾಗಣಿಕೆದಾರರು ಬಳಸಿಕೊಂಡು  ರಸ್ತೆಯನ್ನು ಹಾಳು ಮಾಡಿರುವುದಲ್ಲದೆ ನೀರಿನ ಹಳ್ಳಕ್ಕೆ ಆವೈಜ್ಞಾನಿಕವಾಗಿ ಸೇತುವೆಯನ್ನ ನಿಮಿ೯ಸಿ ಜಮೀನುಗಳು ನೀರಿನಿಂದ ಮುಳುಗಡೆಯಾಗುವ ಬೀತಿ  ಎದುರಾಗಿದೆ ಮರಳುಗಾರಿಕೆಯಿಂದ ಜಲಚರಗಳ ಸಂತತಿ ಹಾಳಾಗುವುದಲ್ಲದೆ  ಮರಳುಗಾರಿಕೆಯಿಂದ ಜಲಮಾಲಿನ್ಯ  ಹಾಗೂ  ಅಪರೂಪದ ಜಲಪ್ರಬೇದಗಳು ಸಹ ನಾಶವಾಗುತ್ತಿವೆ .

ಅಲ್ಲದೆ ಕಾವೇರಿ ನದಿಪಾತ್ರದ ಈ ಭಾಗದಲ್ಲಿ ಪ್ರಮುಖವಾಗಿ ಕಾಣುತ್ತಿದ್ದ ಮಹಾಷಿರ್ ಜಾತಿಯ ಮೀನು ಸುಮಾರು ಕನಿಷ್ಠ 60 ರಿಂದ 200 ಪೌಂಡ್ ತೂಗುವಂತಹ ಮೀನು ಕ್ರೀಡಾ ಪ್ರೇಮಿಗಳಿಗೆ ಕ್ರೀಡಾ ಮೀನೆಂದು ಪ್ರತೀತಿಯಲ್ಲಿದ್ದು ವಿದೇಶಿಯರು ಈ ಮೀನುಗಳ ಜೊತೆ ಆಟವಾಡಿ ದಾಖಲೆಗಳನ್ನು ನಿಮಿ೯ಸಿದ್ದು ಇಂದು ಈ ಮೀನು ಕಾವೇರಿ ನದಿಯಲ್ಲಿ ಹೇರಳವಾಗಿ ಮರಳು ತೆಗೆಯುತ್ತಿರುವುದರಿಂದ ಈ ಮೀನಿನ ಸಂತತಿ ಕಡಿಮೆಯಾಗಿ ಅವನತಿಯತ್ತ ಸಾಗಿರುವುದಲ್ಲದೆ ಪ್ರವಾಸೋದ್ಯಮಕ್ಕೂ ಸಹ ನಷ್ಟ ಉಂಟಾಗಿದೆ .

ಅದಲ್ಲದೆ ಮರಳು ಸಾಗಾಣಿಕೆಯಿಂದ ಪರಿಸರ ಕೂಡ ಹಾಳಾಗಿದ್ದು ಈ ಬಗ್ಗೆ ಪರಿಸರ ಹಾಳಾಗದಂತೆ ನಿಯಂತ್ರಿಸಲು ಕ್ರಮ ಕೈಗೊಳ್ಳುವವರು ಯೂರು ಎಂದು ಕಾದು ನೋಡ ಬೇಕಾಗಿದೆ .

ಈ ಕುರಿತು ಇವರೇನಂತಾರೆ :-


ತಾಲೂಕು ದಂಡಾಧಿಕಾರಿ ಎಂ.ಆರ್. ರಾಜೇಶ್ :- ಉಲ್ಲಂಬಳ್ಳಿಯ ಪ್ರಕರಣ ಗಮನಕ್ಕೆ ಬಂದಿದ್ದು ತಪ್ಪಿತಸ್ತರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು , ರಾತ್ರಿ 7ರ ನಂತರ ಯಾವುದೇ ಮರಳು ಲಾರಿ ಸಂಚರಿಸದ ಹಾಗೆ ಟೋಲ್ ಗೇಟ್ ಗಳನ್ನ ನಿಮಿ೯ಸಿ ನಿಯಂತ್ರಿಸಲಾಗುತ್ತಿದೆ , ಅಲ್ಲದೆ ಆಕ್ರಮ ದಂಧೆ ಸಂಪೂಣ೯ವಾಗಿ ನಿಯಂತ್ರಿಸಲು ಟೋಲ್ ಗೇಟ್ ಗಳನ್ನ ಆಧುನಿಕರಣಗೊಳಿಸಲಾಗಿದ್ದು ಸಿಬ್ಬಂದಿಗೆ ಮೊಬೈಲ್,ವೈರ್ ಲೆಸ್ ಸಂಪಕ೯ ನೀಡಿದ್ದು  ಸಿಸಿ ಟಿವಿಯನ್ನು ಸಹ ಜೊಡಿಸಲಾಗುತ್ತಿದೆ ಆಕ್ರಮ ಸಾಗಣಿಕೆ ಕಂಡುಬಂದಲ್ಲಿ ಎಂತಹ  ಬಲಾಡ್ಯರಾದರು ಸಹ ಕ್ರಿಮಿನಲ್ ಪ್ರಕರಣ ದಾಖಲಿಸಿ ನಿಧಾ೯ಕ್ಷಿಣ್ಯ ಕ್ರಮ ಜರುಗಿಸಲಾಗುವುದು .








ಉಲ್ಲಂಬಳ್ಳಿ ಗ್ರಾ.ಪಂ. ಅದ್ಯಕ್ಷ ನಾಗೇಂದ್ರ :- ಕಳೆದ ವಾರದ ಹಿಂದೆ ಮರಳು ಲಾರಿಯಿಂದ  ಕುರಿಗಳು ಅಪಘಾತಕ್ಕಿಡಾಗಿರುವುದಲ್ಲದೆ , ರೈತರ ಜಮೀನುಗಳಿಗೆ ಹೋಗಲಾರದ ಪರಿಸ್ಥಿತಿ ನಿಮಾ೯ಣವಾಗಿದೆ ಕೖಷಿಯನ್ನೆ ನಂಬಿದ ನಾವು ಕೖಷಿ ಆಧಾರಿತ ಕೆಲಸಗಳನ್ನ  ಈ ರಸ್ತೆಯಲ್ಲಿ ಮಾಡಲಾಗದೆ  ನಾವು ಕಂಗಾಲಾಗಿದ್ದೇವೆ ಮತ್ತೊಂದೆಡೆ ಅಪಘಾತದ ಬೀತಿ ನಮ್ಮ ಮುಂದಿದೆ.  











ಉಲ್ಲಂಬಳ್ಳಿ  ಮಾಜಿ ಗ್ರಾ.ಪಂ ಅದ್ಯಕ್ಷ ನಾಗರಾಜು :- ಕಳೆದ  ಹಲವಾರು ದಿನಗಳಿಂದ  ನಿರಂತರವಾಗಿ ರೈತರ ಕೖಷಿ ಭೂಮಿಗಳನ್ನು ರಸ್ತೆಗಳನ್ನಾಗಿ ನಿಮಿ೯ಸಿ ಮರಳು ಸಾಗಣಿಕೆಗೆ ಬಳಸುತ್ತಿದ್ದು  ಇದರ ನಿಯಂತ್ರಣಕ್ಕೆ  ತಹಶೀಲ್ದಾರ್ ಹಾಗೂ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಸದ್ಯಕ್ಕೆ ಪ್ರತಿಭಟನೆ ಮಾಡಿ ತಾತ್ಕಾಲಿಕವಾಗಿ ಗ್ರಾಮಸ್ಥರ ಸಹಾಯದಿಂದ ನಿಲ್ಲಿಸಿದ್ದೇವೆ.



ಮರಳು ಸಾಗಣಿಕೆಗೆ ಆಕ್ರಮವಾಗಿ ರಸ್ತೆ ನಿಮಿ೯ಸಿ ಕೊಳ್ಳುತ್ತಿರುವ ಚಿತ್ರ.

ಮರಳು ಸಾಗಣಿಕೆಗೆ ಆಕ್ರಮವಾಗಿ ರಸ್ತೆ ನಿಮಿ೯ಸಿ ಕೊಳ್ಳುತ್ತಿರುವ ಚಿತ್ರ.

 ಮರಳು ಲಾರಿಗಳ ಸಂಚಾರದಿಂದ ಗದ್ದೆಗಳಿಗೆ ಸಂಪಕ೯ ಕಲ್ಪಿಸಿರುವ ನೀರಿನ ಪೈಪುಗಳು ಹಾಳಾಗಿದ್ದು ಗದ್ದೆಗಳಿಗೆ ನೀರು ಬರುತ್ತಿಲ್ಲ ರೈತ ಜಮೀನಿಗೆ ನೀರು ಬಾರದೆ ತೊಂದರೆಯಾಗಿರುವುದನ್ನು  ತೊರಿಸುತ್ತಿರುವ ದೖಶ್ಯ.  
ಅನಧೀಕೖತವಾಗಿ ನಿಮಿ೯ಸಿಕೊಂಡಿರುವ ಮರಳು ಸಂಗ್ರಹಣಾ ಯಾಡ್೯ನ ಚಿತ್ರ