ವಿಶೇಷ ವರದಿ :- ಎಂ.ಡಿ. ಉಮೇಶ್ ಮಳವಳ್ಳಿ .
ಮಳವಳ್ಳಿ ಪಟ್ಟಣದ ಅಬೀವೖದ್ದಿಗೆ ಹರಿದು ಬಂದ ಹಣ ಮಾತ್ರ ಕೋಟಿ ಗಟ್ಟಲೆ ಆದರೆ ಪಟ್ಟಣದ ಬಹುತೇಕ ವಾಡ್೯ಗಳಲ್ಲಿ ಆಗಾಗಾ ಸಾಂಕ್ರಾಮಿಕ ರೋಗಗಳು ಕಾಣುತ್ತಿದ್ದರು ಪುರಸಭಾ ಅಧಿಕಾರಿಗಳು , ಆರೋಗ್ಯ ಇಲಾಖೆ ಅಧಿಕಾರಿಗಳು ಇದಕ್ಕೆ ಕಾರಣವನ್ನೆ ಕಂಡು ಕೊಳ್ಳದೆ ಎಮ್ಮೆಗೆ ಜ್ವರ ಬಂದರೆ ಕೊಟ್ಟಿಗೆಗೆ ಬರೆ ಹಾಕುವ ಹಾಗೆ ರೋಗ ಬಂದ ಮೇಲೆ ನಿಯಂತ್ರಣಕ್ಕೆ ತಾತ್ಕಾಲಿಕ ಕ್ರಮ ಕೈಗೊಳ್ಳುವುದು ಎಂತಹ ವಿಪಯಾ೯ಸವಲ್ಲವೆ ? ...
ಏನು ಈ ಸಾಂಕ್ರಾಮಿಕ ರೋಗಳಿಗೆ ಕಾರಣ ಎಂದು ಹುಡುಕುತ್ತ ಹೋದರೆ ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಶೌಚಾಲಯದ ಮಲ ಮಿಶ್ರಿತ ತ್ಯಾಜ್ಯವನ್ನು ತೆರೆದ ಬಾಕ್ಸ್ ಚೆರಂಡಿಯಲ್ಲಿ ಬಿಟ್ಟಿದ್ದು ಈ ಭಾಗದಲ್ಲಿ ಓಡಾಡದ ಪರಿಸ್ಥಿತಿ ನಿಮಾ೯ಣವಾಗಿದ್ದು , ಪಟ್ಟಣದ ಹೖದಯ ಭಾಗದಲ್ಲಿರುವ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಎಡ ಭಾಗದ ರಸ್ತೆಯಲ್ಲಿ ನ್ಯಾಯಾಲಯ , ಐಟಿಐ ಸಂಕೀಣ೯ , ನೂತನ ಕ್ರೀಡಾಂಗಣ , ಅರಣ್ಯ ಇಲಾಖೆ ಸೇರಿದಂತೆ ಇನ್ನೂ ಹಲವಾರು ಕಛೇರಿಗಳಿದ್ದು ಪ್ರತಿ ನಿತ್ಯ ಈ ರಸ್ತೆಯಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿಮಾ೯ಣವಾಗಿದೆ .
ಸುಸಜ್ಜಿತವಾಗಿ ಕನಾ೯ಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಶೌಚಾಲಯವನ್ನು ನಿಮಿ೯ಸಿತ್ತಾದರೂ , ಗುತ್ತಿಗೆದಾರರಿಂದ ನಿವ೯ಹಣೆ ಮಾಡಿಸುತ್ತಿರುವುದೆ ಇದಕ್ಕೆ ಕಾರಣವಾಗಿದೆ ಶೌಚಾಲಯಕ್ಕೆ ಹೊಂದು ಕೊಂಡಂತೆ ಶೌಚಾಲಯದ ಗುಂಡಿಯನ್ನು (ಸೆಪ್ಟಿಕ್ ಟ್ಯಾಂಕ್) ಕೂಡ ನಿಮಿ೯ಸಿದ್ದು ತುಂಬಿ ಹೋಗಿರುವ ಶೌಚಾಲಯದ ಗುಂಡಿಯನ್ನು(ಸೆಪ್ಟಿಕ್ ಟ್ಯಾಂಕ್) ತೆಗೆಸದೆ ಗುತ್ತಿಗೆದಾರರು ಮೂತ್ರ , ಮಲ ತ್ಯಾಜ್ಯವನ್ನು ಚೆರಂಡಿಗೆ ನೇರವಾಗಿ ಬಿಟ್ಟಿರುವುದೆ ಇದಕ್ಕೆ ಮೂಲ ಕಾರಣವಾಗಿದೆ .
ಈ ದುವಾ೯ಸನೆಯನ್ನು ತಡೆಯಲಾರದೆ ಪಟ್ಟಣದ ನ್ಯಾಯಾಲಯದ ನ್ಯಾಯಮೂತಿ೯ ಈರಣ್ಣ , ಹೇಮಪ್ರಸ್ತಾಪ್ ಹುರ್ ಹಾಗೂ ಕಮಲೇಶ್ ಈ ಭಾಗದಲ್ಲಿ ಹರಡುತ್ತಿರುವ ದುವಾ೯ಸನೆಗೆ ಕಾರಣವೇನು ಎಂದು ಹಲವಾರು ಭಾರಿ ಪುರಸಭೆ ಗಮನಕ್ಕೆ ತಂದರು ಕಳೆದ ಹಲವು ವಷ೯ಗಳಿಂದಲೂ ಸಹ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರೂ ಸಹ ಮೂಲವನ್ನು ಕಂಡು ಹಿಡಿಯದೆ ಆರೋಗ್ಯ ಇಲಾಖೆ ಸಿಬ್ಬಂಧಿ ಮತ್ತು ಪುರಸಭೆ ಸಿಬ್ಬಂಧಿ ಮೌನ ವಹಿಸಿರುವುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ .
ಪಟ್ಟಣದ ಬಹುತೇಕ ವಾಡ್೯ಗಳಲ್ಲಿ ಈ ಮಾಲಿನ್ಯ ತ್ಯಾಜ್ಯ ಭರಿತ ನೀರು ಹರಿದು ಹೋಗಲಿದ್ದು ಪಟ್ಟಣದಲ್ಲಿ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು ಇದರಿಂದ ಪಟ್ಟಣದ ಜನ ನಿಬೀಡ ಮೈಸೂರು ರಸ್ತೆ , ಪೇಟೆ ಬೀದಿ ಹಾಗೂ ಗಂಗಮತ ಬೀದಿಗಳಲ್ಲಿ ಹರಿದು ಹೋಗುವ ಈ ನೀರಿನಿಂದಾಗಿ ಈ ಭಾಗದಲ್ಲಿ ಆಗಾಗ ಟೈಫಾಯಿಡ್ , ಮಲೇರಿಯಾ , ವಾಂತಿ-ಬೇದಿ , ಡಯೇರಿಯಾ ,ಕಾಲರಾ ಭೇದಿ ಷಿಗೆಲ್ಲೋಸಿಸ್ , ಹೆಪಟೈಟಿಸ್ ಎ,ಟೈಫಾಯಿಡ್ ಜ್ವರ,ಮಲೇರಿಯ,ಡೆಂಗ್ಯೂ ಜ್ವರ,ಅಸ್ಕರಿಯಾಸಿಸ್ , ರೌಂಡ್ ವರ್ಮ್ ಇನ್ಫೆಸ್ಟೇಷನ್ಸ್ ನಂತಹ ಹಲವಾರು ರೋಗಗಳಿಗೆ ಮುಗ್ಧ ಸಾವ೯ಜನಿಕರು ಹಾಗೂ ಮಕ್ಕಳು ಬಲಿಯಾಗುತ್ತಿದ್ದು ಮತ್ತೊಂದೆಡೆ ಕಲುಷಿತ ನೀರಿನಿಂದಾಗಿ ಸೊಳ್ಳೆಗಳು ಸಹ ಹೆಚ್ಚಾಗುತ್ತಿವೆ .
ಇದರಿಂದ ಜನರಲ್ಲಿ ಹೊಟ್ಟೆ ನೋವು ,ನೀರಿನಂಶದ ಅತಿಸಾರ ಬೇದಿ , ರಕ್ತಸಿಕ್ತ ಲೋಳೆಯ ಬೇದಿ , ವಾಕರಿಕೆ , ಹೊಟ್ಟೆಯ ಸೆಳೆತಗಳು ,ಅಮಿತ ಅತಿಸಾರ ,ಸಿಂಬಳ, ಹೊರಪದರ ಜೀವಕೋಶಗಳು ಮತ್ತು ಬ್ಯಾಕ್ಟೀರಿಯಾವನ್ನು ಒಳಗೊಂಡಿರುವ "ರೈಸ್ ನೀರು" ಬೇದಿ , ಎಲೆಕ್ಟ್ರೋಲೈಟ್, ಆಳವಾದ ನಿರ್ಜಲೀಕರಣಕ, ರಕ್ತಪರಿಚಲನಾ ಕುಸಿತ , ಅನೋರೆಕ್ಸಿಯಾ , ಫೀವರ್ , ಕಾಮಾಲೆ, ತಲೆನೋವು, ದೇಹಾಲಸ್ಯ , ವಾಂತಿ , ಕರುಳಿನ ಜ್ವರ, ಜಠರದ ಉರಿಯೂತ , ಅತಿಯಾದ ಚಳಿ, ಬೆವರುವಿಕೆ, ಸ್ನಾಯು ನೋವುಗಳು , ಅವಿಭಕ್ತ ನೋವು , ಕಣ್ಣಿನ ನೋವು , ರಾಶ್ ಲಕ್ಷಣಗಳು , ಕೆಮ್ಮು , ಉಬ್ಬಸ , ಕಿಬ್ಬೊಟ್ಟೆಯ ಕರುಳಿನಲ್ಲಿ ನೋವು , ಮಾಲ್ ಮಗ್ನತೆ ಉಂಟಾಗುತ್ತಿದೆ .
ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ , ಗಣರಾಜ್ಯೋತ್ಸವ , ಕನ್ನಡ ರಾಜ್ಯೋತ್ಸವ , ಗಾಂಧಿ ಜಯಂತಿ , ಅಂಬೇಡ್ಕರ್ ಜಯಂತಿ , ಕನಕ ಜಯಂತಿ ಯಂತಹ ಇನ್ನು ಹಲವು ರಾಷ್ಟ್ರೀಯ ಹಬ್ಬಗಳನ್ನು ಈ ಕ್ರೀಡಾಂಗಣದಲ್ಲಿಯೆ ಆಯೋಜಿಸಿತ್ತಿದ್ದು ಕ್ರಿಡಾಂಗಣಕ್ಕೆ ಈ ರಸ್ತೆಯಲ್ಲಿ ತೆರಳುವಾಗ ತಾಲ್ಲೂಕಿನ ಎಲ್ಲಾ ಸಕಾ೯ರಿ ಅಧಿಕಾರಿಗಳಿಂದ ಹಿಡಿದು ಶಾಲಾ ಮಕ್ಕಳು , ಕ್ರೀಡಾ ಪಟುಗಳು , ಸಾಂಸ್ಕೖತಿಕ ಕಾರ್ಯಕ್ರಮಗಳನ್ನು ಒಳಗೊಂಡ ಮೆರವಣಿಗೆ ಈ ಹಾದಿಯಲ್ಲಿಯೆ ಸಾಗಲಿದ್ದು ಕಾರ್ಯಕ್ರಮದ ದಿನದಂದು ಮಾತ್ರ ಪುರಸಭೆ ಅಧಿಕಾರಿಗಳು ಒಂದಿಷ್ಟು ಬ್ಲೀಚಿಂಗ್ ಪೌಡರ್ ಅನ್ನು ಹರಡಿ ಕೈ ತೊಳೆದುಕೊಳ್ಳುವುದು ಸವೆ೯ ಸಾಮಾನ್ಯವಾಗಿದೆ .
ಪ್ರತಿ ವಷ೯ ಬೇಸಿಗೆಯಲ್ಲಂತು ಪಟ್ಟಣದಲ್ಲಿ ಎಡ ಬಿಡದೆ ಸಾಂಕ್ರಾಮಿಕ ರೋಗಗಳು ಪುನರ್ ಆವರಿಸುತ್ತಿದ್ದು ಇದರ ನಿಯಂತ್ರಣಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಈಗಲಾದರೂ ಸ್ಪಂಧಿಸುವರೆ ಕಾದು ನೋಡಬೇಕಾಗಿದೆ .
ಈ ಕುರಿತು ಪ್ರತಿನಿತ್ಯ ಈ ರಸ್ತೆಯಲ್ಲೆ ಸಂಚರಿಸುವವರು ಏನಂತಾರೆ ? :-
ಸಕಾ೯ರಿ ಅಭಿಯೋಜಕರಾದ ಕೖಷ್ಣ ಮೂತಿ೯ :- ಕಳೆದ 5-6 ವಷ೯ಗಳಿಂದ ಪುರಸಭಾಧಿಕಾರಿಗಳ ಗಮನಕ್ಕೆ ತಂದಿದ್ದು ನ್ಯಾಯಾಲಯದ ಅವರಣದಲ್ಲಿ ಹಾಗೂ ನ್ಯಾಯಾಲಯಕ್ಕೆ ಸಂಚರಿಸುವ ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಓಡುವ ಪರಿಸ್ಥಿತಿ ನಿಮಾ೯ಣವಾಗಿದೆ ಈ ಕುರಿತು ವಕೀಲರ ವೖಂದ ಸಾವ೯ಜನಿಕ ಹಿತಾಸಕ್ತಿ ಅಜಿ೯ಯನ್ನು ಹಾಕುವ ಸಂಬವವೂ ಸನ್ನಿತವಾಗಿದೆ ಕೆಲವು ವಕೀಲರುಗಳಲ್ಲಿ ಮಾಲಿನ್ಯ ವಾಸನೆಯಿಂದ ಶ್ವಾಸ ಕೋಶ ಸಂಬಂಧಿ ಕಾಯಿಲೆಗಳು ಕಂಡಿದ್ದು ಯಾರೆ ಪ್ರಕರಣ ದಾಖಲಿಸಿದಲ್ಲಿ ನಿಧಾ೯ಕ್ಷಿಣ್ಯ ಕ್ರಮ ಕೈಗೊಳ್ಳಲು ಕಾನೂನು ವ್ಯಾಪ್ತಿಯಲ್ಲಿ ಅವಕಾಶವಿದೆ .
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ ಹಾಗೂ ತಹಶೀಲ್ದಾರ್ ರಾಜೇಶ್ :- ಈ ಕುರಿತು ಸಾವ೯ಜನಿಕರು ಆಭಾಗದಲ್ಲಿರುವ ನ್ಯಾಯಾಲಯದ ಸಿಬ್ಬಂಧಿ ನ್ಯಾಯಾಧೀಶರು ಹಾಗೂ ಅಧಿಕಾರಿಗಳು ದುವಾ೯ಸನೆಯ ಬಗ್ಗೆ ದೂರು ಕೇಳಿ ಬರುತ್ತಿದ್ದು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಾರೆ .
ತ್ಯಾಜ್ಯ ವಿಲೇವಾರಿ ಬಗ್ಗೆ ಪುರಸಭಾ ಅಧಿಕಾರಿಗಳು ಏನೆನ್ನುತ್ತಾರೆ ?:-
ಪುರಸಭಾ ಮುಖ್ಯಾಧಿಕಾರಿ ಮಂಜುನಾಥ್ :- ಕಾನೂನಿನ ವ್ಯಾಪ್ತಿಯೊಳಗೆ ಮಾಲಿನ್ಯ ನೀರನ್ನಾಗಲಿ , ಮಲ ಹಾಗೂ ಮತ್ತಿತರ ತ್ಯಾಜ್ಯ ಮಿಶ್ರಿತ ನೀರನ್ನಾಗಲಿ ತೆರೆದ ಚೆರಂಡಿಯಲ್ಲಿ ಬಿಡಲು ಅವಕಾಶವಿರುವುದಿಲ್ಲ ಪಟ್ಟಣದಾಧ್ಯಂತ ಇಂತಹ ತ್ಯಾಜ್ಯಗಳನ್ನು ಚೆರಂಡಿಯಲ್ಲಿ ಬಿಟ್ಟಿರುವುದನ್ನು ಗುರುತಿಸಿ ನಿಧಾ೯ಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ .
ಪುರಸಭೆ ಪರಿಸರ ಅಭಿಯಂತರರಾದ ಪಾವ೯ತಿ :- ಪಟ್ಟಣದಲ್ಲಿ ಸಾವ೯ಜನಿಕರು ತಮ್ಮ ಶೌಚಾಲಯದ ಗುಂಡಿಗಳ್ನನು ತೆಗೆಸಲು ಸೆಕ್ಷನ್ ಪಂಪ್ ಅಳವಡಿಸಿ ಭತಿ೯ಯಾದ ಗುಂಡಿಗಳನ್ನು ಖಾಲಿಗೊಳಿಸಲಾಗುತ್ತದೆ ಇದಕ್ಕೆ ಪುರಸಭೆ ವತಿಯಿಂದ 2000 ರೂಗಳನ್ನು ನಿಗಧಿ ಪಡಿಸಲಾಗಿದ್ದು ಸಾವ೯ಜನಿಕರು ಹಣ ಪಾವತಿಸಿದ ಮರು ಕ್ಷಣವೆ ಯಂತ್ರವನ್ನು ಕಳುಹಿಸಕೊಡಲಾಗುತ್ತದೆ .
ಪುರಸಭೆ ಆರೋಗ್ಯ ಅಧಿಕಾರಿ ಪುಷ್ಪಲತಾ :- ಮಲ ಮೂತ್ರ ವಿಸಜ೯ನೆಯ ಗುಂಡಿಗಳು ಭತಿ೯ಯಾಗಿ ತೆರೆದ ಚೆರಂಡಿಗೆ ಬಿಟ್ಟಿರುವ ವಿಚಾರವನ್ನು ಆಜು ಬಾಜು ದಾರರು ದೂರು ನೀಡಿದಲ್ಲಿ ನೋಟೀಸ್ ನೀಡಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ .
ಕೆಎಸ್ಆರ್ ಟಿಸಿ ಸಾವ೯ಜನಿಕ ಶೌಚಾಲಯದ ಮಲಮೂತ್ರವನ್ನು ಬಾಕ್ಸ್ ಚೆರಂಡಿಗೆ ಹರಿದು ಬಿಟ್ಟಿರುವ ದೖಶ್ಯ .
ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಸಾವ೯ಜನಿಕ ಶೌಚಾಲಯದ ಚಿತ್ರ .
ಪುರಸಭೆಯ ಮಲ ಮೂತ್ರ ತೆಗೆಯಲು ಬಳಸುವ ಸೆಕ್ಷನ್ ಯಂತ್ರದ ಚಿತ್ರ .
No comments:
Post a Comment