ಜಿ.ಬಿ ಪುರ ಹಾಗೂ ಮಲೇ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಯುಗಾದಿ ಅಮಾವಾಸೆಯ ವಿಶೇಷ ಪೂಜೆ |
ಬಿ.ಜಿ ಪುರದ ಮಠದಲ್ಲಿ ನಡೆದ ಯುಗಾದಿ ಅಮಾವಾಸೆಯ ವಿಶೇಷ ಪೂಜೆಯ ಚಿತ್ರ |
ಬಿ.ಜಿ ಪುರದ ಮಠದಲ್ಲಿ ನಡೆದ ಯುಗಾದಿ ಅಮಾವಾಸೆಯ ವಿಶೇಷ ಪೂಜೆಯ ಚಿತ್ರ |
ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನದ ಚಿತ್ರ |
ಯುಗಾದಿ ಹಬ್ಬದ ವಿಶೇಷ ಅಮಾವಾವ್ಯೆ ಜಾತ್ರೆಯ ಪೂಜೆಗೆ ಜನಸಾಗರ ಮಲೆಮಹದೇಶ್ವರ ಬೆಟ್ಟ ಹಾಗೂ ಬಿ.ಜಿ.ಪುರ ಮಠಕ್ಕೆ ಸಾಗಿದ್ದು ಮಂಡ್ಯ,ಮೈಸೂರು,ಚಾಮರಾಜನಗರ,ಬೆಂಗಳೂರು ಹಾಗೂ ಗ್ರಾಮಾಂತರ ಜಿಲ್ಲೆಗಳಿಂದ ಪೂಜೆ ಸಲ್ಲಿಸಲು ಸಾಗುತ್ತಿರುವ ಜನ ನಾ ಮುಂದು ತಾ ಮುಂದು ಎಂದು ಸಾಗಿದ್ದಾರೆ.
ಕರ್ನಾಟಕದ ಪ್ರಸಿದ್ಧ ಯಾತ್ರಾಸ್ಥಳದಲ್ಲಿ ಒಂದಾದ ಮಲೆಮಹದೇಶ್ವರ ಬೆಟ್ಟ ಪ್ರಾಕೖತಿಕ ವನಸಿರಿಯ ಮಧ್ಯದಲ್ಲಿದ್ದು ಸಮುದ್ರಮಟ್ಟದಿಂದ ಮೂರು ಸಾವಿರ ಅಡಿ ಎತ್ತರದಲ್ಲಿರುವ ಮಹದೇಶ್ವರ ಸ್ವಾಮಿಯ ದರ್ಶನ ಪಡೆಯಲು ಪ್ರತಿ ವರ್ಷ ಲಕ್ಷಾಂತರ ಜನರು ಬೆಟ್ಟಕ್ಕೆ ಬರುತ್ತಾರೆ ಮಹದೇಶ್ವರ ಬೆಟ್ಟಕ್ಕೆ ತೆರಳಬೇಕಾದರೆ ಮಳವಳ್ಳಿ-ಕೊಳ್ಳೆಗಾಲ ಹೊರತು ಪಡಿಸಿ ತಮಿಳುನಾಡಿನಿಂದ ಮಾತ್ರ ರಸ್ತೆ ಸೌಕಯ೯ವಿದ್ದು ಈ ಭಾಗದಲ್ಲಿ ದೇವರ ದಶ೯ನಕ್ಕೆಂದು ಸಾಗುವ ಯಾತ್ರಿಕರ ಸಂಖ್ಯೆ ಪ್ರತೀ ವಷ೯ ಹೆಚ್ಚಾಗುತ್ತಲೆ ಇದೆ.
ಇತಿಹಾಸದ ಪುಟಗಳಲ್ಲಿ ಹಲವಾರು ಪವಾಡಗಳನ್ನು ಸೖಷ್ಠಿಸಿ ಚಾರಿತ್ರಿಕ ಪುರುಷನೆನಿಸಿಕೊಂಡ ಮಲೆಮಹದೇಶ್ವರನನ್ನು ಗ್ರಾಮೀಣ ಜನರು ಮಾದಪ್ಪ,ಮುದ್ದು ಮಾದಪ್ಪ,ಏಳು ಮಲೆ ಮಾದಪ್ಪ ನೆಂದೂ ಕರೆಯುತ್ತಾರೆ ದೇವರ ಗುಡ್ಡರು ಹಾಡುವ ಮೌಖಿಕ ಮಹಾ ಕಾವ್ಯವೇ ಮಾದಪ್ಪನ ನೆಲೆ ಅರಿಯಲು ಇರುವ ಮೂಲ ಆಕರವಾಗಿದ್ದು ಮಹದೇಶ್ವರ ಸ್ವಾಮಿ ಶ್ರೀಶೈಲದಿಂದ ದಕ್ಷಿಣದ ಮೈಸೂರು ಸೀಮೆಯ ‘ಕತ್ತಲ ರಾಜ್ಯ’ಕ್ಕೆ ಬಂದು ಜನರ ಕಲ್ಯಾಣಕ್ಕಾಗಿ ನೆಲೆ ನಿಂತರು ಎನ್ನಲಾಗಿದೆ. ಕ್ರಿ.ಶ. 1838ರಲ್ಲಿದ್ದ ದೇವಚಂದ್ರ ಕವಿಯ ‘ರಾಜಾವಳಿ ಕಥಾಸಾರ’ ಕೃತಿ ಮಹದೇಶ್ವರ ಮಾದಿಗ ಸಮುದಾಯಕ್ಕೆ ಸೇರಿದವನು ಎಂದು ಹೇಳುತ್ತದೆಯಾದರೂ ಈತ ವೀರಶೈವ ಸಮುದಾಯಕ್ಕೆ ಸೇರಿದವನು ಎಂಬ ವಾದವೂ ಇದೆ.
15- 16ನೇ ಶತಮಾನದ ನಡುವೆ ಕಾಲಘಟ್ಟದಲ್ಲಿ ಮಹದೇಶ್ವರಸ್ವಾಮಿಗೆ ಬುಡಕಟ್ಟುಗಳ ಜನರು,ಕುರುಬ ಸಮುದಾಯದ ಜೇನು ಕುರುಬ ಹಾಗೂ ಕಾಡು ಕುರುಬ,ಸೋಲಿಗ ಸಮುದಾಯ ಸೇರಿದಂತೆ ದಲಿತರು ಹಾಗೂ ಹಿಂದುಳಿದ ಸಮುದಾಯಗಳ ಜನರು ಒಕ್ಕಲಾಗಿದ್ದು ಅವರಿಂದ ವಿಶಿಷ್ಟ ಪಂಥವೊಂದು ಸೃಷ್ಟಿಯಾಯಿತು ಎನ್ನುವುದು ಮಾದಪ್ಪನ ಹೆಗ್ಗಳಿಕೆಯಾಗಿದ್ದು ಕಂಪಣ ಬೇಡರು ಮಲೆ ಮಹದೇಶ್ವರ ಗುಡಿಯಲ್ಲಿ ತಂಬಡಿಕೆ ಮಾಡುತ್ತಾರೆ,ಮಹದೇಶ್ವರರು ಐಕ್ಯರಾದ ಗುಡಿ ಮಲೆ ಮಹದೇಶ್ವರ ಬೆಟ್ಟದಲ್ಲಿದೆ.
ಜಾತ್ರಾ ವಿಶೇಷ: ಮಲೆ ಮಹದೇಶ್ವರ ದೇವಸ್ಥಾನದಲ್ಲಿ ನಿತ್ಯ ಪೂಜೆಯಿದ್ದರು ಅಮಾವಾಸೆಯ ಪೂಜೆಗೆ ವಿಶೇಷ ಶಕ್ತಿಯಿದೆ ಎಂಬ ನಂಬಿಕೆಯಿದ್ದು ಅದರಲ್ಲೂ ಯುಗಾದಿ ಅಮಾವಾಸ್ಯೆಯ ಪೂಜೆ ಅತೀ ಶ್ರೇಷ್ಠ ಹಾಗೂ ಕಳ್ಳರ ದೈವ ಎಂದೇ ಪ್ರತೀತಿಯಲ್ಲಿದ್ದು ಯುಗಾದಿ ಅಮಾವಾಸ್ಯೆಯಲ್ಲಿ ವಿಶೇಷ ಪೂಜೆ ಸಲ್ಲಿಸಲು ಕಳ್ಳರು ಅಮಾವಾಸೆಯ ದಿನದಂದು ಕಳ್ಳತನ ಮಾಡಿ ಯಾರಿಗೂ ಗೊತ್ತಾಗದ ಹಾಗೆ ತಾನು ಮಾಡಿರುವ ಕಳ್ಳತನವನ್ನು ಯಾರಿಗೂ ತಿಳಿಯದ ಹಾಗೆ ತನ್ನನ್ನು ರಕ್ಷಿಸು ಎಂದು ಪೂಜಿಸುವುದು ಆದಿಕಾಲದಿಂದಲೂ ನಡೆದು ಬಂದಿದೆ.
ವಿಶೇಷವಾಗಿ ಮಹಾಲಯ ಅಮಾವಾಸ್ಯೆ, ದೀಪಾವಳಿ, ಕಾತಿ೯ಕ ಮಾಸ, ಮಹಾ ಶಿವರಾತ್ರಿ ಹಾಗೂ ಯುಗಾದಿ ಸಂದರ್ಭಗಳಲ್ಲಿ ಬೆಟ್ಟದಲ್ಲಿ ವಿಶೇಷ ಜಾತ್ರಾ ಉತ್ಸವಗಳು ನಡೆಯುತ್ತವೆ ಅಲ್ಲದೆ ಕೆ.ಆರ್ ನಗರ ತಾಲ್ಲೂಕಿನ ಕಪಡಿ ಜಾತ್ರೆ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದು ಅಲ್ಲಿಂದ ಬಂದಂತಹ ಭಕ್ತಾಧಿಗಳು ಸ್ವಾಮೀಜಿಗಳ ಸಮೇತ ಯುಗಾದಿ ಅಮಾವಾಸೆಯ ದಿನದಂದು ಬಿ.ಜಿ ಪುರ ಮಠದ ಹೊರವಲಯದ ಮುಟ್ಟನಹಳ್ಳಿ ತೋಪಿನಲ್ಲಿ ವಿಶೇಷ ಪೂಜೆ ಸಲ್ಲಿಸಿ ಧಾಮಿ೯ಕ ವಿಧಿ ವಿಧಾನಗಳೊಂದಿಗೆ ಯುಗಾದಿ ಅಮಾವಾಸೆಯದಿನ ಮಧ್ಯಾಹ್ನ ಶುಭ ಮುಹೂತ೯ದಲ್ಲಿ ಮಠ ಪ್ರವೇಶ ಮಾಡಲಿದ್ದಾರೆ.
ಬೆಟ್ಟಕ್ಕೆ ತೆರಳುವ ಯಾತ್ರಿಕರಿಗೆ ಸುತ್ತಮುತ್ತ ಹಲವು ಪ್ರವಾಸಿ ತಾಣಗಳಿದ್ದು ಇಲ್ಲಿಂದ ಹೊಗೇನಕಲ್,ಗೋಪಿನಾಥಂ,ನಾಗಮಲೆ ಅಲ್ಲದೆ ಹಿಂದಿರುಗುವಾಗ ಬಿಳಿಗಿರಿರಂಗನ ಬೆಟ್ಟ,ಗಗನಚುಕ್ಕಿ ಹಾಗೂ ಭರಚುಕ್ಕಿ ಜಲಪಾತಗಳನ್ನು ವೀಕ್ಷಿಸಬಹುದಾಗಿದ್ದು ಯಾತ್ರಿಕರ ಅನುಕೂಲಕ್ಕಾಗಿ ಮಂಡ್ಯ,ಮಳವಳ್ಳಿ ಹಾಗೂ ಕೊಳ್ಳೇಗಾಲದಿಂದ ಬೆಟ್ಟಕ್ಕೆ ನೆರವಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಬಸ್ ಸೌಕಯ೯ವನ್ನು ಕಲ್ಪಿಸಲಾಗಿದ್ದ್ದು ಈ ಕುರಿತು ಪ್ರತಿಕ್ರಿಯಿಸಿದ ಮಳವಳ್ಳಿ ಘಟಕ ವ್ಯವಸ್ಥಾಪಕ ಶಾಂತರಾಜ್ ಮಹದೇಶ್ವರನ ಬೆಟ್ಟಕ್ಕೆ ವಿವಿಧ ಭಾಗಗಳಿಂದ 150 ಬಸ್ ಗಳನ್ನು ನಿಯೋಜಿಸಲಾಗಿದೆ ಅಂತೆಯೇ ಬಿ.ಜಿ.ಪುರ ಮಠಕ್ಕೂ ಸಹ 30 ಬಸ್ ಗಳನ್ನು ನಿಯೋಜಿಸಲಾಗಿದೆ ಸಾವ೯ಜನಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.
No comments:
Post a Comment