Tuesday, 3 April 2012

ವಾಸುವಳ್ಳಿ ಬೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ


           ವಾಸುವಳ್ಳಿ ಬೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

ಮಳವಳ್ಳಿ,ಏ.3.

ಕನಾ೯ಟಕದಲ್ಲಿ ಜನತೆ ನೆಮ್ಮದಿ ಶಾಂತಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಸಹಬಾಳ್ವೆ ನಡೆಸುವಂತಾಗಲಿ ನಾಡಿನಲ್ಲಿ ಒಳ್ಳೆಯ ಮಳೆಯಾಗಿ ಸಮೖದ್ದಿಯ ಬೆಳೆಯಾಗಲಿ ರಾಜ್ಯದ ಆರೂವರೆ ಕೋಟಿ ಜನರಿಗೆ ಬೀರೇಶ್ವರ ಸ್ವಾಮಿ ಒಳ್ಳೆಯದನ್ನು ಉಂಟು ಮಾಡಲಿ ಎಂದು ವಿರೋದ ಪಕ್ಷದ ನಾಯಕ ರಾಜ್ಯದ ಕಾಂಗ್ರೇಸ್ ಹಿರಿಯ ಮುಖಂಡ ಸಿದ್ದರಾಮಯ್ಯ ಆಶಯ ವ್ಯಕ್ತಪಡಿಸಿದರು .

ತಾಲ್ಲೂಕಿನ ಬೆಳಕವಾಡಿ ಸಮೀಪದ ವಾಸುವಳ್ಳಿ ಗ್ರಾಮದಲ್ಲಿ 14 ವಷ೯ಗಳಿಗೊಮ್ಮೆ ನಡೆಯುವ ಶ್ರೀ ವಾಸುವಳ್ಳಿ ಬೀರೇಶ್ವರ ಸ್ವಾಮಿಯ ದೊಡ್ಡ ಹಬ್ಬದ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜ್ಯದ 123 ತಾಲ್ಲೂಕುಗಳಲ್ಲಿ ಬರಗಾಲವಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು ಅನೇಕ ಭಾಗಗಳಲ್ಲಿ ಕುಡಿಯುವ ನೀರಿಗೆ ಜನತೆ ತತ್ತರಿಸುವಂತಾಗಿದ್ದು ಇವರ ಭವಣೆಯನ್ನು ನೀಗಿಸಲು ಸಿದ್ದರಾಮೇಶ್ವರ ಹಾಗೂ ಬೀರೇಶ್ವರ ಎಲ್ಲರಿಗೂ ಒಳ್ಳೆಯದನ್ನೂ ಮಾಡಲಿ ಎಂದು ಆಶಿಸಿದರು .

ಶೋಷಿತ ವಗ೯ದವರೆಲ್ಲಾ ಆರಾಧಿಸುವುದು ಶೈವ ಪರಂಪರೆಯಾಗಿದ್ದು ನಾವೆಲ್ಲರೂ ಶೈವ ಪಂಥಕ್ಕೆ ಸೇರಿದವರಾಗಿದ್ದು ದೇವರೊಬ್ಬನೆ ಹಾಗೂ ನಾಮ ಹಲವು ಭಕ್ತಿಯಿಂದ ಎಲ್ಲರು ನಮನ ಸಲ್ಲಿಸಬೇಕು ಎಂದ ಅವರು ಸಾವಿರಾರು ಜನ ಬಂದಿದ್ದೀರಿ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದೆ ಶಾಂತಿಯಿಂದ ದೇವರ ದಶ೯ನ ಮಾಡಿ ತಮ್ಮ ಸ್ವಸ್ಥಳಕ್ಕೆ ತೆರಳಬೇಕೆಂದು ತಿಳಿಸಿದರು .

ನಾನು ಎಂಬ ಅಹಂ ಬಿಟ್ಟಾಗ ದೇವರನ್ನು ಒಲಿಸಿಕೊಳ್ಳಲು ಸಾಧ್ಯ ಅಹಂ ಬಿಟ್ಟಾಗ ಮಾತ್ರ ದೇವರು ಅನುಗ್ರಹ ತೋರುತ್ತಾನೆ ದೇವರ ಪ್ರೀತಿಯೊಂದಿಗೆ ನಿಮ್ಮ ಆಶೀವಾ೯ದ ನಮ್ಮ ಮೇಲಿರಲಿ ಎಂದು ಮನವಿ ಮಾಡಿದ ಅವರು ನಿಮ್ಮ ಪ್ರೋತ್ಸಾಹ ಪ್ರೀತಿ ವಿಶ್ವಾಸ ಆಶೀವಾ೯ದ ನನ್ನ ಮೇಲಿದ್ದರೆ ಯಾವ ಹೋರಾಟಕ್ಕೆ ಸಿದ್ದನಾಗಿ ನಿಮ್ಮ ಮುಂಚೂಣಿಯ ಮುಖಂಡತ್ವ ವಹಿಸಿಲು ಬದ್ಧನಾಗಿರುತ್ತೇನೆ ಎಂದರು .

ಮಾಜಿ ಸಚಿವ ಶಾಸಕ ಪಿ.ಎಂ ನರೇಂದ್ರಸ್ವಾಮಿ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸಮಾಜದ ದೀನ ದಲಿತರ ಹಿಂದುಳಿದ ನಾಯಕರಾದ ಮಾಜಿ ಉಪಮುಖ್ಯಮಂತ್ರಿ ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯನವರು ಈ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುವ ಅವಕಾಶ ಸಿಗಲಿ ಈ ಅವಕಾಶಕ್ಕಾಗಿ ತಾವೆಲ್ಲರೂ ಬೆಂಬಲಿಸಿ ಎಂದು ಮನವಿ ಮಾಡಿದರು .

ಕೆಪಿಸಿಸಿ ಮುಖಂಡ ದಡದಪುರ ಶಿವಣ್ಣ ಮಾತನಾಡಿ ದಿವಂಗತ ದೇವಾರಜುಅರಸ್ ರವರ ನಂತರ ಹಿಂದುಳಿದ ನಾಯಕರಾಗಿ ಸಿದ್ದರಾಮಯ್ಯ ಹೊರಹೊಮ್ಮಿದ್ದು ಇವರಿಗೆ ಈ ರಾಜ್ಯದ ಮುಖ್ಯಮಂತ್ರಿಯನ್ನಾಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಈ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯನಿವ೯ಹಿಸಿ ಬೆಂಬಲ ನೀಡೋಣ ಎಂದು ತಿಳಿಸಿದರು .

ವೇದಿಕೆಯಲ್ಲಿ ಮಾಜಿ ಶಾಸಕ ಡಾ|| ಕೆ.ಅನ್ನಧಾನಿ , ಬಿಜೆಪಿ ಮುಖಂಡ ಮುನಿರಾಜ್ , ಆದಶ೯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ|| ಮೂತಿ೯ , ಕೆಪಿಸಿಸಿ ಸದಸ್ಯರುಗಳಾದ ಸುರೇಶ್ , ಜಯಣ್ಣ , ಯಮದೂರು ಸಿದ್ದರಾಜ್ , ಕಾಂಗ್ರೇಸ್ ಮುಖಂಡ ಕೆಂಪರಾಜು , ಸಮಾಜದ ಹಿರಿಯ ಮುಖಂಡ ಸಿದ್ದೇಗೌಡ , ಪ್ರಭಾರ ತಾ.ಪಂ ಅಧ್ಯಕ್ಷ ಚಿಕ್ಕಲಿಂಗಯ್ಯ , ಜಿ.ಪಂ ಸದಸ್ಯೆ ಶಿವಮ್ಮ , ಗ್ರಾ.ಪಂ ಸದಸ್ಯರುಗಳಾದ ಚಿಕ್ಕಮ್ಮ , ಗುರುಸ್ವಾಮಿ , ಜಯರಾಜು , ಲಿಂಗರಾಜು ಸೇರಿದಂತೆ ಸಹಸ್ರಾರು ಭಕ್ತಾದಿಗಳು ಹಾಗೂ ಸಿದ್ದರಾಮಯ್ಯ ನವರ ಅಭಿಮಾನಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು .
------------------------------------------------------------------------------------------------------------


                                       ವಿಶೇಷ ವರದಿ :- ಎಂ.ಡಿ. ಉಮೇಶ್ ಮಳವಳ್ಳಿ

ಇತಿಹಾಸ ಪ್ರಸಿದ್ದ ವಾಸುವಳ್ಳಿ ಬೀರೇಶ್ವರ ದೇವರ ವೈಭವದ ದೊಡ್ಡ ಹಬ್ಬದ ಜಾತ್ರೆ 10 ಕೂಟಗಳ ಏಳುಮಡಿ ಉತ್ಸವ ಇಂದು ಆರತಿ ಮತ್ತು ಕೂಟಗಳು ಸೇಪ೯ಡೆಗೊಂಡು ಶ್ರದ್ದೆ ಭಕ್ತಿಯಿಂದ ಬೀರೇಶ್ವರನ ಕೖಪೆಗೆ ಪಾತ್ರರಾದರು .

ಜಾತ್ರೆಯಲ್ಲಿ ಮಾರೇಹಳ್ಳಿ ಬೀರೇಶ್ವರ , ಚಂದಹಳ್ಳಿ ಬೀರೇಶ್ವರ , ವಾಸುವಳ್ಳಿ ಬೀರೇಶ್ವರ , ಅಗಸನಪುರ ಬೀರೇಶ್ವರ , ಹೊನ್ನೂರು ಬೀರೇಶ್ವರ , ತಲಕಾಡು ಬೀರೇಶ್ವರ, ಪುರಿಗಾಲಿ ಬೀರೇಶ್ವರ,ಕಾಳಿಹುಂಡಿ ಬಲಮಾಂಕಾಳಿ,ಸಿದ್ದರಾಮೇಶ್ವರ ಸ್ವಾಮಿ , ಬೀರೇಶ್ವರಸ್ವಾಮಿ ,  ಶ್ರೀ ಹೊನ್ನೂರು ಬೀರೇಶ್ವರಸ್ವಾಮಿ , ಶ್ರೀ ಕೋಮಾರನಪುರದ ಬೀರೇಶ್ವರಸ್ವಾಮಿ ಪ್ರತಿ 13-14 ವರ್ಷಗಳಿಗೊಮ್ಮೆ ನಡೆಯುವ ವೈಭವದ ಕೂಟಗಳ ಜಾತ್ರೆ ವಾರದ ವಿಶಿಷ್ಟ ಸೋಮವಾರದಂದು ಕೂಟಗಳು ಸೇರಿಕೊಂಡು  ಮಂಗಳವಾರ ದೇವರ ಪ್ರಸಾದದ ಕೂಟದೊಂದಿಗೆ ವೈವಿದ್ಯಮಯ ಪಟ್ಟದ ದೇವರ ಕುಣಿತಗಳು ಬುಧುವಾರ ತೆರೆಕಾಣುವ ಈ ದೊಡ್ಡಹಬ್ಬದ ಜಾತ್ರೆಯಲ್ಲಿ ಅನ್ನ ಸಂತಪ೯ಣೆ ಕಾಯ೯ಮುಗಿದ ಮರುಗಳಿಗೆಯಲ್ಲಿ  ಪವಾಡ ಸಂದೖಶದಲ್ಲಿ ಭಕ್ತಾಧಿಗಳ ಬೇಡಿಕೆಗಳು ಈಡೇರಿಕೆಗಳಾಗುವುದೆಂಬ ಪ್ರತಿತಿ ಇದೆ .

ಸೋಮವಾರ ಪ್ರರಂಭವಾದ ಉತ್ಸವದಲ್ಲಿ ಪಂಜಿನ ಸೇವೆ ಹಾಗೂ ಏಳುಮಡಿವೊಡ್ಡಿ  ದೇವರನ್ನು ಕರೆತಂದು ಧಾಮಿ೯ಕ ವಿಧಿವಿದಾನಗಳೊಂದಿಗೆ ಪೂಜೆಸಲ್ಲಿಸಿ ನಂದಿಕಂಬ , ಪಟ್ಟದಕುಣಿತ , ವೀರಕುಣಿತ , ಹಾಲುಮಕ್ಕಳ ಕುಣಿತ , ಕಂಸಾಳೆ ಕುಣಿತ ಸೇರಿದಂತೆ ಬೀರ ದೇವರುಗಳ ವಿವಿಧ ಭಂಗಿಯ ಕುಣಿತಗಳು ನಡೆದು ವಾಸುವಳ್ಳಿ ಗ್ರಾಮಸ್ಥರು ಕೊಂಡಕ್ಕೆ ಸೌದೆಯನ್ನು ಜೋಡಿಸಿ ರಾತ್ರಿಯೆಲ್ಲಾ ದೇವರ ಕೂಟಗಳು ಬೆಳಕವಾಡಿ ಕಾವೇರಿ ನದಿ ತೀರದಲ್ಲಿ ತಾನಗಟ್ಟದಿಂದ ತಮಟೆ ನಗಾರಿ ಬಸವಗಳು ಹಾಗೂ ಕೊಂಬು ಕಹಳೆಯೊಂದಿಗೆ ಎಲ್ಲ ಗಡಿಯ ಯಜಮಾನರು ಬೆಳಕವಾಡಿ ನಾಡಗೌಡ ಸಮಾಜ ಮುಖಂಡರೊಡನೆ ರಾಜಬೀದಿಯಲ್ಲಿ ಎಲ್ಲಾ ಜನಾಂಗದ ಮುಖಂಡರೊಡನೆ ಏಳು ಮಡಿಯೊಂದಿಗೆ ಸಾಗಿ ಬಂದು ರಾತ್ರಿ ಕೊಂಡೋತ್ಸವ ಜರುಗಿತು  ಹಾಗೂ 10 ಕೂಟಗಳ ಯಜಮಾನರುಗಳು,ಹೆಗ್ಗಡೆಗಳು ಸೇರಿದಂತೆ ಕರಿಯ ಕಂಬಳಿಯನ್ನು ಹೊದ್ದಿಕೊಂಡು ಹಳುಮಕ್ಕಳು ದೇವರನ್ನು ಜಪಿಸುತ್ತ  ವೈಭವದ ಪೂಜೆಗಳಿಗೆ ಚಾಲನೆ ನೀಡುತ್ತಾರೆ.

ಮಂಗಳವಾರ ಮಜ್ಜನ ತರುವುದು ವೀರ ಮಕ್ಕಳ ರಂಗ ಕುಣಿತ ಕಾರ್ಯಕ್ರಮಗಳು ನೆರವೇರಿದವು ಬುಧವಾರ ಹೆಗ್ಗಡೆ ಮೇಲೆ ಆರತಿ ಹಾಗೂ ಎಲ್ಲಾ ಗಡಿಗಳ ಕಾರರು ಸಕ್ಕರೆ ವಿಳ್ಯೇದೊಡನೆ ವಾದ್ಯ ಸಮೇತ ಬೀಳ್ಕೊಡಲಾಯಿತು  .

ಕುರುಬರ ಕುಲದ ಡೊಳ್ಳುಕುಣಿತ ಕುರುಬರ ವಿಶಿಷ್ಟ ಕಲೆಯಾಗಿದ್ದು ಕುರುಬ ಗೌಡರು ಹಾಗೂ ಹೆಗ್ಗಡೆಗಳು ಡೊಳ್ಳಿನ ತಾಳಗಳಿಗೆ ಹೆಜ್ಜೆಹಾಕುತ್ತ ಹಾಲುಮತ ಪುರಾಣ ಹಾಗೂ ಕುರುಬ ಪುರಾಣವನ್ನ ಡೊಳ್ಳಿನ ನಾದದೊಂದಿಗೆ ನೆರೆದಿದ್ದ ಭಕ್ತ ಸಾಗರಕ್ಕೆ ಪುರಾಣದ ಉಲ್ಲೇಖಗಳನ್ನ ಸಾರುತ್ತ ಮೈನವಿರೇರಿಸುವ ದೖಶ್ಯ ಸಾಮಾನ್ಯವಾಗಿತ್ತು.

ಇದಕ್ಕಾಗಿ ಸೋಮವಾರ ಮಧ್ಯಾಹ್ನದಿಂದಲೇ ಕಮಾನು ಕಟ್ಟಿದ ನೂರಾರು ಎತ್ತಿನಗಾಡಿಗಳು ಸೇರಿದಂತೆ ವಿವಿಧ ವಾಹನಗಳ ಮೂಲಕ ಜನರು ಬಂದು ದೇವಸ್ಥಾನದ ಆವರಣಗಳಲ್ಲಿ ಬೀಡುಬಿಟ್ಟು ಕೂಠಿರಗಳನ್ನು ನಿಮಿ೯ಸಿ ಕೊಂಡು ದೇವರ ದಶ೯ನಕ್ಕಾಗಿ ಹೆಡಿಗೆ ಹೊತ್ತು ತಂದು ಪೂಜೆಸಲ್ಲಿಸಿದರು

ದೇವಾಲಯದವರೆಗೂ 25 ಸಾವಿರಕ್ಕೂ ಹೆಚ್ಚು  ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು ವಿಶೇಷವಾಗಿದ್ದು ಜಿಲ್ಲೆಯ ವಿವಿದೇಡೆಗಳಿದ್ದಲ್ಲದೆ ರಾಜ್ಯದ ಹಲವು ಭಾಗಗಳಿಂದಲ್ಲದೆ ನೇರರಾಜ್ಯ ಆಂದ್ರ ಮತ್ತು ತಮಿಳು ನಾಡು  ಭಕ್ತ ಸಾಗರವೆ ಹರಿದು ಬಂದಿತ್ತು .

ವಿವಿಧ ದಾಮಿ೯ಕ ಮುಖಂಡರುಗಳು ಸೇರಿದಂತೆ ಕುರುಬ ಕುಲದ ಯಜಮಾನರು , ದೇವರ ಹೆಗ್ಗಡೆಗಳು ಮಾಜಿ ಉಪಮುಖ್ಯಮಂತ್ರಿ ಹಾಗೂ ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕ ಡಾ.ಕೆ ಅನ್ನದಾನಿ,ಬಿಜೆಪಿ ಮುಖಂಡ ಮುನಿರಾಜ್, ಆದರ್ಶ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಡಾ.ಮೂರ್ತಿ ಇತರ ಗಣ್ಯರು ಪೂಜೆ ಸಲ್ಲಿಸಿ ನೆರೆದಿದ್ದ ಭಕ್ತ ಸಾಗರಕ್ಕೆ ಶುಭ ಕೋರಿದರು .           
       

No comments:

Post a Comment