Monday, 9 April 2012

ಮಳವಳ್ಳಿ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಆಹಾಕಾರ



                      ವರದಿ :-  ಎಂ.ಡಿ. ಉಮೇಶ್ ಮಳವಳ್ಳಿ


ಹೆಸರು ಕುಬೇರ ಜೇಬಲ್ಲಿ ಬಿಡುಗಾಸಿಲ್ಲ ಎಂಬ ಗಾದೆ ಮಾತಿನಂತಾಗಿದೆ ಮಳವಳ್ಳಿ ಪಟ್ಟಣ ಹಾಗೂ ತಾಲ್ಲೂಕಿನ ಬಹುತೇಕ ಹಳ್ಳಿಗಳ ಕುಡಿಯುವ ನೀರಿನ ಸ್ಥಿತಿ ಏಕೆಂದರೆ ಕನ್ನಂಬಾಡಿ ಕಟ್ಟೆ ನಿಮಾ೯ಣಕ್ಕೆ ಅತೀ ಹೆಚ್ಚಿನ ದೇಣಿಗೆ ನೀಡಿದ್ದು ಮಳವಳ್ಳಿ ತಾಲ್ಲೂಕು ಆದರೂ ಕಾವೇರಿ ನದಿ ಅಕ್ಕಪಕ್ಕದಲ್ಲಿ  ಕುಡಿಯುವ ನೀರಿಗಾಗಿ ಪರದಾಡಲಾಗುತ್ತಿದೆ . ಮಳವಳ್ಳಿ ಪಟ್ಟಣದ ಶೇ.40ರಷ್ಟು ಭಾಗದ ಜನ ಇವತ್ತಿಗೂ ಭೋರ್ ವೆಲ್ ನೀರನ್ನು ಕುಡಿಯುತ್ತಿದ್ದಾರೆ ಅಲ್ಲದೇ ಕಾವೇರಿ ನದಿ ತಾಲ್ಲೂಕಿನ ಬಹುತೇಕ ಅಕ್ಕಪಕ್ಕದಲ್ಲಿ ಹರಿಯುತ್ತಿದ್ದರೂ ನದಿ ಪಾತ್ರದ ಹಳ್ಳಿಗಳಲ್ಲೂ ಸಹ ನೀರಿಗೆ ಪರದಾಡಲಾಗುತ್ತಿದೆ .

ರಾಜ್ಯದ ರಾಜಧಾನಿ ಬೆಂಗಳೂರಿಗೆ ಶೇ.80ರಷ್ಟು ನೀರನ್ನು ಒದಗಿಸುವ ಕೀಥಿ೯ ಮಳವಳ್ಳಿ ತಾಲ್ಲೂಕಿಗಿದ್ದು ತೊರೆ ಕಾಡನಹಳ್ಳಿಯಿಂದ ಪ್ರತಿನಿತ್ಯ ಮೂರು ಪ್ರತ್ಯೇಕ ಕೊಳವೆಗಳ ಮೂಲಕ ನೀರನ್ನು ಒದಗಿಸಲಾಗುತ್ತಿದ್ದು ನಾಲ್ಕನೇ ಹಂತದ ಯೋಜನೆಯಲ್ಲಿ ಬೆಂಗಳೂರಿನ ಬಹೇತಕ ಎಲ್ಲಾ ಹಳ್ಳಿಗಳಿಗೂ ಹಾಗೂ ಕೈಗಾರಿಕಾ ಪ್ರದೇಶಗಳಿಗೂ ನೀರನ್ನು ಒದಗಿಸಲು ಕ್ರಮಕೈಗೊಳ್ಳಲಾಗಿದೆ ಆದರೆ ದೀಪದ ಕೆಳಗೆ ಕತ್ತಲು ಎನ್ನುವ ಹಾಗೆ ಹಲಗೂರು,ಬಿ.ಜಿ. ಪುರ ಹಾಗೂ ಕಿರುಗಾವಲು ಹೋಬಳಿಯ ಬಹುತೇಕ ಭಾಗದಲ್ಲಿ ಕಾವೇರಿ ನದಿ ಹರಿಯುತ್ತಿದ್ದರು ಈ ಭಾಗದ ಜನರಿಗೆ ಈವರೆಗೆ ಕಾವೇರಿ ನದಿ ನೀರಿನಿಂದ ಶುದ್ದ ಕುಡಿಯುವ ನೀರಿನ ಯೋಜನೆಯನ್ನ ಪ್ರಾರಂಭಿಸಲಾಗಿಲ್ಲ .

ಮಳವಳ್ಳಿ ಪಟ್ಟಣದ ನೀರಿನ ವಿತರಣಾ ವ್ಯವಸ್ಥೆ ತಜ್ಞರ ಕೊರತೆಯಿಂದಾಗಿ ಸರಿಯಿರುವುದಿಲ್ಲ ಒಂದೆಡೆಯಾದರೆ ಮತ್ತೊಂದೆಡೆ ಕಳಪೆ ಗುಣಮಟ್ಟದ  ಕಾಮಗಾರಿಯಿಂದಾಗಿ ನೀರು ಪೋಲಾಗುತ್ತಿದ್ದು ಸಮಪ೯ಕ ಕರೆಂಟ್ ಇಲ್ಲದೆ ಬೇಸಿಗೆ ಕಾಲದಲ್ಲಂತೂ ಕುಡಿಯುವ ನೀರಿಗಾಗಿ ಜನರ ಭವಣೆ ಹೇಳತೀರದಾಗಿದೆ .

ಗ್ರಾಮೀಣ ಪ್ರದೇಶದಲ್ಲಂತೂ ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಭೋರ್ ವೆಲ್ ಗಳನ್ನೆ ಅವಲಂಬಿಸಿದ್ದು ವಿಷಕಾರಿಕ ಪ್ಲೋರೈಡ್ ನೀರಿನಾಂಶ ಪತ್ತೆಯಾಗಿದ್ದು  ಹೀಗಾಗಿ ಜನ ಆರೋಗ್ಯದ ಮೇಲೆ ವ್ಯತಿರುಕ್ತ ಪರಿಣಾಮ ಬೀರುತ್ತಿದ್ದು ನದಿಗಳ ಮೂಲಕ ಶುದ್ದ ಕುಡಿಯುವ ನೀರನ್ನು ಸರಬರಾಜು ಮಾಡುವ ಉದ್ದೇಶವನ್ನು ಜಿಲ್ಲಾಡಳಿತ ಇಟ್ಟುಕೊಂಡಿದೆ ಎಂಬ ಕಡತಗಳು ಅನುಮೋದನೆಗೊಳ್ಳದೆ ಕಡತಗಳಾಗಿಯೇ ಉಳಿದಿದೆ .

ಗ್ರಾಮೀಣ ಪ್ರದೇಶಗಳಲ್ಲಿ ಪ್ರಮುಖವಾಗಿ ವಿದ್ಯುತ್ ಸಮಸ್ಯೆ ನಿರಂತರವಾಗಿದ್ದು ಕರೆಂಟ್ ಕೈಕೊಟ್ಟಾಗ ಪಯಾ೯ಯ ವ್ಯವಸ್ಥೆ ಇಲ್ಲದೇ ಕರೆಂಟ್ ಬರುವ ವರೆಗೂ ಕಾಯುವ ಪರಿಸ್ಥಿತಿ ನಿಮಾ೯ಣವಾಗಿದೆ .

ಬೇಸಿಗೆಯ ನೀರಿನ ಭವಣೆಯನ್ನು ನೀಗಿಸಲು ಜಿಲ್ಲಾಡಳಿತದ ಸ್ಪಷ್ಟ ನಿಧೇ೯ಶನದೊಂದಿಗೆ ಎರಡು ಸಭೆಗಳನ್ನು ನಡೆಸಿ ಕುಡಿಯುವ ನೀರಿನ ಅಭಾವ ಆಗದಂತೆ ಕ್ರಮ ಜರುಗಿಸಲು ಸಮಿತಿಯನ್ನ ರಚಿಸಲಾಗಿದೆ .
ಈ ಕುರಿತು ಇವರು ಏನೆನ್ನುತ್ತಾರೆ ? :-

      ತಾ.ಪಂ ಕಾರ್ಯಾನಿವಾ೯ಹಣಾಧಿಕಾರಿ ಓಂಕಾರಪ್ಪ :- ನೀರಿನ ಭವಣೆಯನ್ನು ನೀಗಿಸಲು 30 ಲಕ್ಷ ರೂ ವೆಚ್ಚದಲ್ಲಿ 12 ಹಳ್ಳಿಗಳಿಗೆ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಸಮಪ೯ಕ ಕುಡಿಯುವ ನೀರನ್ನು ಪೂರೈಸುವ ಸಲುವಾಗಿ ಟ್ಯಾಂಕರ್ ಗಳ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ ತಾಲ್ಲೂಕಿನ ಕೆಂಚನದೊಡ್ಡಿ , ವಡ್ಡರದೊಡ್ಡಿ ಗ್ರಾಮಗಳಲ್ಲಿ ಅಂತಜ೯ಲ ಸಂಪೂಣ೯ವಾಗಿ ಕುಸಿದಿದ್ದು ಪಯಾ೯ಯ ವ್ಯವಸ್ಥೆ ಮಾಡಲಾಗಿದೆ ತಾಲ್ಲೂಕಿನ ತಳಗವಾದಿ ಗ್ರಾ.ಪಂ ವ್ಯಾಪ್ತಿಯ ದೇವಿಪುರ ಹಾಗೂ ಅಣಸಾಲೆ ವ್ಯಾಪ್ತಿಯ ಕೊಳವೆ ಬಾವಿಗಳಲ್ಲಿ ವಿಷಕಾರಿಕ ನೈಟ್ರೈಡ್ ಹಾಗೂ ಪ್ಲೋರೈಡ್ ಅಂಶಗಳು ಕಂಡುಬಂದಿದ್ದು ಇವುಗಳನ್ನು ಬಳಸದಂತೆ ಕ್ರಮ ಕೈಗೊಳ್ಳಲಾಗಿದೆ .





ತಾಲ್ಲೂಕು ದಂಡಾಧಿಕಾರಿ ರಾಜೇಶ್ :-  ಬೇಸಿಗೆಯ ನೀರಿನ ಭವಣೆಯನ್ನು ನೀಗಿಸಲು ಜಿಲ್ಲಾಧಿಕಾರಿಗಳ ನಿಧೇ೯ಶನದೊಂದಿಗೆ ಟಾಸ್ಕ್ ಪೋಸ್೯ ಕಮಿಟಿಯನ್ನು ರಚಿಸಲಾಗಿದ್ದು ಕುಡಿಯುವ ನೀರಿನ ತೊಂದರೆ ಕಂಡು ಬಂದ ಸ್ಥಳಗಳಲ್ಲಿ ತಕ್ಷಣವೆ ಕೊಳವೆ ಬಾವಿ ಕೊರೆಸಲಾಗುತ್ತಿದೆ ತಾಲ್ಲೂಕಿನ ಕಾಳಕೆಂಪನದೊಡ್ಡಿಯಲ್ಲಿ ಇಂದು ನೀರಿನ ತೊಂದರೆ ಕಾಣಿಸಿಕೊಂಡಿದ್ದು ಸ್ಥಳಕ್ಕೆ ಅಧಿಕಾರಿಗಳು ಹಾಗೂ ಅಂತಜ೯ಲ ತಜ್ಞರು ಬೇಟಿ ನೀಡಿ ಕ್ರಮ ಕೈಗೊಳುತ್ತಿದ್ದಾರೆ ಕುಡಿಯುವ ನೀರಿಗಾಗಿ ತಾಲ್ಲೂಕಿನಲೆಲ್ಲೂ ಆಹಾಕಾರ ಉಲ್ಬಣಿಸದ ಹಾಗೆ ಕ್ರಮ ಕೈಗೊಳ್ಳಲಾಗುತ್ತಿದೆ .



ಸಾವ೯ಜನಿಕರು ಮಾಡಬೇಕಾಗಿದ್ದೇನೇನು :-
1. ಅಗತ್ಯವಿದ್ದಾಗ ಮಾತ್ರ ನಲ್ಲಿಗಳನ್ನು ಬಳಸಬೇಕು ನೀರನ್ನು ಪೋಲು ಮಾಡಬಾರದು ನೀರಿನ ಮಹತ್ವ ಅರಿತು ಅಗತ್ಯವಾದ ನೀರನ್ನು ತೆಗೆದುಕೊಂಡ ನಂತರ ಅನಗತ್ಯವಾಗಿ ಪೋಲೂ ಮಾಡದೆ ನಲ್ಲಿಗಳನ್ನು ಬಂದ್ ಮಾಡಬೇಕು .
2. ಪ್ರತಿವಷ೯ ಅಂತಜ೯ಲದ ಮಟ್ಟ ಕುಸಿಯುತ್ತಿದ್ದು ಅಂತಜ೯ಲವನ್ನು ಅಭೀವೖದ್ದಿ ಪಡಿಸಲು ಮಳೆ ನೀರಿನ ಕೂಯ್ಲನ್ನು ಪ್ರತಿ ಮನೆಯಲ್ಲೂ ಅಳವಡಿಸಿಕೊಳ್ಳಬೇಕು .
3. ಕೈ ತೋಟಗಳಿಗೆ ಪುನರ್ ಬಳಕೆ ನೀರನ್ನು ಬಳಸಿಕೊಳ್ಳಬೇಕು ಅಲ್ಲದೇ ಅಂತಜ೯ಲವನ್ನು ದುರುಪಯೋಗ ಮಾಡದ ಹಾಗೆ ಕ್ರಮ ವಹಿಸಬೇಕು .
4. ವಾಡ್೯ಗಳಲ್ಲಿ ಅನಗತ್ಯವಾಗಿ ಪೋಲೀಗುತ್ತಿದ್ದ ನೀರಿನ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಜೀವ ಜಲವನ್ನು ಸಂರಕ್ಷಿಸಲು ಅಗತ್ಯವಿರುವ ಕ್ರಮಗಳನ್ನು ಅನುಸರಿಸಲು ಮುಂದಾಗಬೇಕು .
          ಬೇಸಿಗೆ ಕುಡಿಯುವ ನೀರಿನ ಹಾಹಾಕಾರದಿಂದಾಗಿ ಕಾಗೆಯೊಂದು ನಲ್ಲಿಯ ಮೇಲೆ ಕುಳಿತುನೀರು ಕುಡಿಯುತ್ತಿರುವುದು
                  
ಬೇಸಿಗೆಯ ಝಳಕ್ಕೆ ಕೆರೆ ಬತ್ತಿ ಕೆರೆಯ ಮಧ್ಯದ ಗುಂಡಿಯಲ್ಲಿ ಜಾನುವಾರುಗಳು ನೀರು ಕುಡಿಯುತ್ತಿರುವ ದೖಶ್ಯ .


No comments:

Post a Comment