Tuesday, 22 May 2012

ಇಂದಿನಿಂದ ಮಳವಳ್ಳಿ ತಾಲ್ಲೂಕಿನಲ್ಲಿ ಆನೆಗಳ ಗಣತಿ ಕಾರ್ಯ ಪ್ರಾರಂಭ


                 ವಿಶೇಷ ವರದಿ :ಎಂ.ಡಿ. ಉಮೇಶ್ ಮಳವಳ್ಳಿ

ಮಳವಳ್ಳಿ,ಮೇ.22.

ಮಂಡ್ಯ ಜಿಲ್ಲೆಯಲ್ಲಿಯೆ ಅತೀ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವ ಮಳವಳ್ಳಿ ತಾಲ್ಲೂಕಿನಲ್ಲಿ ಆನೆಗಳ ಗಣತಿ ಕಾರ್ಯ ಆರಂಭವಾಗಿದ್ದು ಪ್ರಥಮ ದಿನವಾದ ಇಂದು ತಾಲ್ಲೂಕಿನ ಅರಣ್ಯ ವ್ಯಾಪ್ತಿಯಲ್ಲಿ ಐದು ತಂಡಗಳನ್ನು ರಚಿಸಿ ಪ್ರತಿ ತಂಡಗಳಲ್ಲಿ ನಾಲ್ವರು ಆನೆಗಳ ಗಣತಿಗೆ ಚಾಲನೆ ನೀಡಿದ್ದಾರೆ .

ತಾಲ್ಲೂಕಿನ ಶಿಂಷಾ ಅರಣ್ಯ ವ್ಯಾಪ್ತಿಯಲ್ಲಿ ಎರಡು ತಂಡಗಳು ಹಾಗೂ ಧನಗೂರು ವ್ಯಾಪ್ತಿಯಲ್ಲಿ 1 ತಂಡ ಹಾಗೂ ಹಲಗೂರು ಅರಣ್ಯ ವ್ಯಾಪ್ತಿಯಲ್ಲಿ 2 ತಂಡ ಕಾರ್ಯ ನಿವ೯ಹಿಸುತ್ತಿದ್ದು ಪ್ರತಿ ತಂಡದಲ್ಲಿ ಒಬ್ಬ ಅರಣ್ಯ ಸಂರಕ್ಷಣಾಧಿಕಾರಿ , ಒಬ್ಬ ರಕ್ಷಕ , ಒಬ್ಬ ವೀಕ್ಷಕ ಹಾಗೂ ಒಬ್ಬ ಪ್ರೇರಕ ಸೇರಿದಂತೆ ಪ್ರತಿ ತಂಡದಲ್ಲಿ ನಾಲ್ಕು ಜನರಿದ್ದು ಆನೆಗಳ ಗಣತಿ ಕಾರ್ಯ ಕ್ಷಿಪ್ರ ಗತಿಯಲ್ಲಿ ನಡೆಯುತ್ತಿದೆ .

ಶಿಂಷಾ ಅರಣ್ಯ ತಂಡದಲ್ಲಿ ತಂಡಗಳಲ್ಲಿ ಅರಣ್ಯ ಉಪ ವಲಯ ಸಂರಕ್ಷಣಾಧಿಕಾರಿ ಎಸ್.ಶಂಕರ್ ಹಾಗೂ ಕಾಳಪ್ಪ ನೇತೖತ್ವ ವಹಿಸಿದ್ದು ಇಂದು ಪ್ರಾರಂಭವಾದ ಗಣತಿ ಕಾರ್ಯದಲ್ಲಿ ಸೂಕದ ಜಗಲಿ , ಕೊಳದ ಹಳ್ಳ , ಕಕ್ಕೆ ಕಟ್ಟೆ , ರೊಣಗಲ್ಲು ಮಟ್ಟ ಹಾಗೂ ಚಿಕ್ಕ ಮಾಕಳಿ ಮಾಗ೯ದಲ್ಲಿ ಒಂದು ತಂಡ ಕಾರ್ಯನಿವ೯ಹಿಸಿ ಮತ್ತೊಂಡು ತಂಡ ಚೆಕ್ ಡ್ಯಾಮ್ , ಮುತ್ತಿನ ಕಟ್ಟೆ , ಧಮ೯ ಕಟ್ಟೆ , ಕೆರೆ ಒಡ್ಡು , ಜಲಮಾಂದ ಕಟ್ಟೆ , ಕೋಟೆ ಹೊಲದ ಕೆರೆ , ಹಾಗೂ ಬೋಡ್೯ ಗಲ್ಲ್ ಮಾಗ೯ದಲ್ಲಿ ಕಾರ್ಯನಿವ೯ಹಿಸಿ ಆನೆ ಗಣತಿಗೆ ಚಾಲನೆ ನೀಡಿದರು .

ಈ ತಂಡದಲ್ಲಿ ಅರಣ್ಯ ರಕ್ಷಕರಾದ ನಂದೀಶ್ , ಬಸವಯ್ಯ , ಅರಣ್ಯ ವೀಕ್ಷಕರಾದ ವೀರಣ್ಣ , ಬೊಮ್ಮಯ್ಯ , ಸಿದ್ದಯ್ಯ , ಅರಣ್ಯ ಪ್ರೇರಕರಾದ ನಾಗಣ್ಣ ಇವರು ಜೊತೆಗಿದ್ದರು ಗಣತಿ ಕಾರ್ಯ ನಿವ೯ಹಿಸುವ ಸಂಧಭ೯ದಲ್ಲಿ ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾದಿಕಾರಿ ಎ.ಎಸ್ ಗಂಗರಾಜು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಮಲಿಂಗೇಗೌಡ , ವಲಯ ಅರಣ್ಯಾಧಿಕಾರಿಗಾದ ಎಂ.ಸಿ ಗೀತಾ ಮತ್ತು ಎಂ.ಸಿ ಭಾಗ್ಯಲಕ್ಷ್ಮಿ ಬೇಟಿ ನೀಡಿ ಗಣತಿ ಕಾರ್ಯದ ಪರಿಶೀಲನೆ ನಡೆಸಿ ಮಾಗ೯ದಶ೯ನ ನೀಡಿದರು .

     

ಕನಾ೯ಟಕ ರಾಜ್ಯದಲ್ಲಿ ಇಂದು ಆನೆಗಳ ಗಣತಿ ಕಾರ್ಯ ಆರಂಭವಾಗಿದ್ದು ರಾಜ್ಯದಲ್ಲಿ 4 ರಿಂದ 6 ಸಾವಿರ ಆನೆಗಳಿರ ಬಹುದೆಂದು ಈಗಾಗಲೆ ಅಂದಾಜಿಸಲಾಗಿದ್ದು ಗಣತಿ ಕಾರ್ಯ ಮುಗಿದ ನಂತರ ಸಂಪೂಣ೯ ಮಾಹಿತಿ ದೊರೆಯಲಿದೆ ತಾಲ್ಲೂಕಿನ ಧನಗೂರು ಅರಣ್ಯ ವ್ಯಾಪ್ತಿಯಲ್ಲಿ ಸಹಾಯಕ ವಲಯ ಅರಣ್ಯಾಧಿಕಾರಿ ನಾಗೇಂದ್ರ ಪ್ರಸಾದ್ ಕಾರ್ಯನಿವ೯ಹಿಸುತ್ತಿದ್ದು ಬಸವನ ಬೆಟ್ಟ ಹಾಗೂ ಬೀಮೇಶ್ವರಿ ಭಾಗದಲ್ಲಿ ದೇವರಾಜ್ ಹಾಗೂ ವೆಂಕಟೇಶ್ ತಂಡಗಳು   ಕಾರ್ಯನಿವ೯ಹಿಸುತ್ತಿವೆ .

ಬಹುತೇಕ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿರುವ ಆನೆಗಳ ಗಣತಿ ಕಾರ್ಯ ಮೇ.25ಕ್ಕೆ ಮುಗಿದು ಮೇ.26 ರಂದು ಸಂಪೂಣ೯ ಮಾಹಿತಿ ದೊರೆಯಲಿದೆ ಅಲ್ಲದೆ ಪ್ರತ್ಯೇಕ ತಂಡಗಳಲ್ಲಿ ಅರಣ್ಯದ ಒಳಭಾಗದಲ್ಲಿ 3  ಅರಣ್ಯ ಜೀಪುಗಳು ಗಸ್ತು ನಡೆಸುತ್ತಿದ್ದು ಇದರಲ್ಲೂ ಸಹ ಅರಣ್ಯ ಇಲಾಖೆ ಸಿಬ್ಬಂಧಿ ಆನೆ ಗಣತಿ ಕಾರ್ಯದಲ್ಲಿ ತೊಡಗಿದ್ದಾರೆ .


ತಾಲ್ಲೂಕಿನ ಶಿಂಷಾ ಅರಣ್ಯ ಪ್ರದೇಶದಲ್ಲಿ ಆನೆ ಗಣತಿ ಕಾರ್ಯದಲ್ಲಿ ತೊಡಗಿರುವ ಅರಣ್ಯ ಇಲಾಖೆಯ ಸಿಬ್ಬಂಧಿ ವಗ೯ದವರ ಚಿತ್ರ .

                        ತಾಲ್ಲೂಕಿನ ಶಿಂಷಾ ಅರಣ್ಯ ಪ್ರದೇಶದಲ್ಲಿ ಆನೆ ಗಣತಿ ಕಾರ್ಯದಲ್ಲಿ  ಆನೆಗಳ  ಚಿತ್ರ 



Friday, 4 May 2012

70ನೇ ವಷ೯ದ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ಮುಖಂಡ ಮುನಿರಾಜು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಿ.ಸಿ ತಮ್ಮಣ್ಣ ಅವರನ್ನು ಸನ್ಮಾನಿಸುತ್ತಿರುವ ದೖಶ್ಯ

70ನೇ ವಷ೯ದ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ಮುಖಂಡ ಮುನಿರಾಜು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಿ.ಸಿ ತಮ್ಮಣ್ಣ ಅವರನ್ನು ಸನ್ಮಾನಿಸುತ್ತಿರುವ ದೖಶ್ಯ 

Monday, 9 April 2012

ಮಳವಳ್ಳಿ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಆಹಾಕಾರ



                      ವರದಿ :-  ಎಂ.ಡಿ. ಉಮೇಶ್ ಮಳವಳ್ಳಿ


ಹೆಸರು ಕುಬೇರ ಜೇಬಲ್ಲಿ ಬಿಡುಗಾಸಿಲ್ಲ ಎಂಬ ಗಾದೆ ಮಾತಿನಂತಾಗಿದೆ ಮಳವಳ್ಳಿ ಪಟ್ಟಣ ಹಾಗೂ ತಾಲ್ಲೂಕಿನ ಬಹುತೇಕ ಹಳ್ಳಿಗಳ ಕುಡಿಯುವ ನೀರಿನ ಸ್ಥಿತಿ ಏಕೆಂದರೆ ಕನ್ನಂಬಾಡಿ ಕಟ್ಟೆ ನಿಮಾ೯ಣಕ್ಕೆ ಅತೀ ಹೆಚ್ಚಿನ ದೇಣಿಗೆ ನೀಡಿದ್ದು ಮಳವಳ್ಳಿ ತಾಲ್ಲೂಕು ಆದರೂ ಕಾವೇರಿ ನದಿ ಅಕ್ಕಪಕ್ಕದಲ್ಲಿ  ಕುಡಿಯುವ ನೀರಿಗಾಗಿ ಪರದಾಡಲಾಗುತ್ತಿದೆ . ಮಳವಳ್ಳಿ ಪಟ್ಟಣದ ಶೇ.40ರಷ್ಟು ಭಾಗದ ಜನ ಇವತ್ತಿಗೂ ಭೋರ್ ವೆಲ್ ನೀರನ್ನು ಕುಡಿಯುತ್ತಿದ್ದಾರೆ ಅಲ್ಲದೇ ಕಾವೇರಿ ನದಿ ತಾಲ್ಲೂಕಿನ ಬಹುತೇಕ ಅಕ್ಕಪಕ್ಕದಲ್ಲಿ ಹರಿಯುತ್ತಿದ್ದರೂ ನದಿ ಪಾತ್ರದ ಹಳ್ಳಿಗಳಲ್ಲೂ ಸಹ ನೀರಿಗೆ ಪರದಾಡಲಾಗುತ್ತಿದೆ .

ರಾಜ್ಯದ ರಾಜಧಾನಿ ಬೆಂಗಳೂರಿಗೆ ಶೇ.80ರಷ್ಟು ನೀರನ್ನು ಒದಗಿಸುವ ಕೀಥಿ೯ ಮಳವಳ್ಳಿ ತಾಲ್ಲೂಕಿಗಿದ್ದು ತೊರೆ ಕಾಡನಹಳ್ಳಿಯಿಂದ ಪ್ರತಿನಿತ್ಯ ಮೂರು ಪ್ರತ್ಯೇಕ ಕೊಳವೆಗಳ ಮೂಲಕ ನೀರನ್ನು ಒದಗಿಸಲಾಗುತ್ತಿದ್ದು ನಾಲ್ಕನೇ ಹಂತದ ಯೋಜನೆಯಲ್ಲಿ ಬೆಂಗಳೂರಿನ ಬಹೇತಕ ಎಲ್ಲಾ ಹಳ್ಳಿಗಳಿಗೂ ಹಾಗೂ ಕೈಗಾರಿಕಾ ಪ್ರದೇಶಗಳಿಗೂ ನೀರನ್ನು ಒದಗಿಸಲು ಕ್ರಮಕೈಗೊಳ್ಳಲಾಗಿದೆ ಆದರೆ ದೀಪದ ಕೆಳಗೆ ಕತ್ತಲು ಎನ್ನುವ ಹಾಗೆ ಹಲಗೂರು,ಬಿ.ಜಿ. ಪುರ ಹಾಗೂ ಕಿರುಗಾವಲು ಹೋಬಳಿಯ ಬಹುತೇಕ ಭಾಗದಲ್ಲಿ ಕಾವೇರಿ ನದಿ ಹರಿಯುತ್ತಿದ್ದರು ಈ ಭಾಗದ ಜನರಿಗೆ ಈವರೆಗೆ ಕಾವೇರಿ ನದಿ ನೀರಿನಿಂದ ಶುದ್ದ ಕುಡಿಯುವ ನೀರಿನ ಯೋಜನೆಯನ್ನ ಪ್ರಾರಂಭಿಸಲಾಗಿಲ್ಲ .

ಮಳವಳ್ಳಿ ಪಟ್ಟಣದ ನೀರಿನ ವಿತರಣಾ ವ್ಯವಸ್ಥೆ ತಜ್ಞರ ಕೊರತೆಯಿಂದಾಗಿ ಸರಿಯಿರುವುದಿಲ್ಲ ಒಂದೆಡೆಯಾದರೆ ಮತ್ತೊಂದೆಡೆ ಕಳಪೆ ಗುಣಮಟ್ಟದ  ಕಾಮಗಾರಿಯಿಂದಾಗಿ ನೀರು ಪೋಲಾಗುತ್ತಿದ್ದು ಸಮಪ೯ಕ ಕರೆಂಟ್ ಇಲ್ಲದೆ ಬೇಸಿಗೆ ಕಾಲದಲ್ಲಂತೂ ಕುಡಿಯುವ ನೀರಿಗಾಗಿ ಜನರ ಭವಣೆ ಹೇಳತೀರದಾಗಿದೆ .

ಗ್ರಾಮೀಣ ಪ್ರದೇಶದಲ್ಲಂತೂ ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಭೋರ್ ವೆಲ್ ಗಳನ್ನೆ ಅವಲಂಬಿಸಿದ್ದು ವಿಷಕಾರಿಕ ಪ್ಲೋರೈಡ್ ನೀರಿನಾಂಶ ಪತ್ತೆಯಾಗಿದ್ದು  ಹೀಗಾಗಿ ಜನ ಆರೋಗ್ಯದ ಮೇಲೆ ವ್ಯತಿರುಕ್ತ ಪರಿಣಾಮ ಬೀರುತ್ತಿದ್ದು ನದಿಗಳ ಮೂಲಕ ಶುದ್ದ ಕುಡಿಯುವ ನೀರನ್ನು ಸರಬರಾಜು ಮಾಡುವ ಉದ್ದೇಶವನ್ನು ಜಿಲ್ಲಾಡಳಿತ ಇಟ್ಟುಕೊಂಡಿದೆ ಎಂಬ ಕಡತಗಳು ಅನುಮೋದನೆಗೊಳ್ಳದೆ ಕಡತಗಳಾಗಿಯೇ ಉಳಿದಿದೆ .

ಗ್ರಾಮೀಣ ಪ್ರದೇಶಗಳಲ್ಲಿ ಪ್ರಮುಖವಾಗಿ ವಿದ್ಯುತ್ ಸಮಸ್ಯೆ ನಿರಂತರವಾಗಿದ್ದು ಕರೆಂಟ್ ಕೈಕೊಟ್ಟಾಗ ಪಯಾ೯ಯ ವ್ಯವಸ್ಥೆ ಇಲ್ಲದೇ ಕರೆಂಟ್ ಬರುವ ವರೆಗೂ ಕಾಯುವ ಪರಿಸ್ಥಿತಿ ನಿಮಾ೯ಣವಾಗಿದೆ .

ಬೇಸಿಗೆಯ ನೀರಿನ ಭವಣೆಯನ್ನು ನೀಗಿಸಲು ಜಿಲ್ಲಾಡಳಿತದ ಸ್ಪಷ್ಟ ನಿಧೇ೯ಶನದೊಂದಿಗೆ ಎರಡು ಸಭೆಗಳನ್ನು ನಡೆಸಿ ಕುಡಿಯುವ ನೀರಿನ ಅಭಾವ ಆಗದಂತೆ ಕ್ರಮ ಜರುಗಿಸಲು ಸಮಿತಿಯನ್ನ ರಚಿಸಲಾಗಿದೆ .
ಈ ಕುರಿತು ಇವರು ಏನೆನ್ನುತ್ತಾರೆ ? :-

      ತಾ.ಪಂ ಕಾರ್ಯಾನಿವಾ೯ಹಣಾಧಿಕಾರಿ ಓಂಕಾರಪ್ಪ :- ನೀರಿನ ಭವಣೆಯನ್ನು ನೀಗಿಸಲು 30 ಲಕ್ಷ ರೂ ವೆಚ್ಚದಲ್ಲಿ 12 ಹಳ್ಳಿಗಳಿಗೆ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಸಮಪ೯ಕ ಕುಡಿಯುವ ನೀರನ್ನು ಪೂರೈಸುವ ಸಲುವಾಗಿ ಟ್ಯಾಂಕರ್ ಗಳ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ ತಾಲ್ಲೂಕಿನ ಕೆಂಚನದೊಡ್ಡಿ , ವಡ್ಡರದೊಡ್ಡಿ ಗ್ರಾಮಗಳಲ್ಲಿ ಅಂತಜ೯ಲ ಸಂಪೂಣ೯ವಾಗಿ ಕುಸಿದಿದ್ದು ಪಯಾ೯ಯ ವ್ಯವಸ್ಥೆ ಮಾಡಲಾಗಿದೆ ತಾಲ್ಲೂಕಿನ ತಳಗವಾದಿ ಗ್ರಾ.ಪಂ ವ್ಯಾಪ್ತಿಯ ದೇವಿಪುರ ಹಾಗೂ ಅಣಸಾಲೆ ವ್ಯಾಪ್ತಿಯ ಕೊಳವೆ ಬಾವಿಗಳಲ್ಲಿ ವಿಷಕಾರಿಕ ನೈಟ್ರೈಡ್ ಹಾಗೂ ಪ್ಲೋರೈಡ್ ಅಂಶಗಳು ಕಂಡುಬಂದಿದ್ದು ಇವುಗಳನ್ನು ಬಳಸದಂತೆ ಕ್ರಮ ಕೈಗೊಳ್ಳಲಾಗಿದೆ .





ತಾಲ್ಲೂಕು ದಂಡಾಧಿಕಾರಿ ರಾಜೇಶ್ :-  ಬೇಸಿಗೆಯ ನೀರಿನ ಭವಣೆಯನ್ನು ನೀಗಿಸಲು ಜಿಲ್ಲಾಧಿಕಾರಿಗಳ ನಿಧೇ೯ಶನದೊಂದಿಗೆ ಟಾಸ್ಕ್ ಪೋಸ್೯ ಕಮಿಟಿಯನ್ನು ರಚಿಸಲಾಗಿದ್ದು ಕುಡಿಯುವ ನೀರಿನ ತೊಂದರೆ ಕಂಡು ಬಂದ ಸ್ಥಳಗಳಲ್ಲಿ ತಕ್ಷಣವೆ ಕೊಳವೆ ಬಾವಿ ಕೊರೆಸಲಾಗುತ್ತಿದೆ ತಾಲ್ಲೂಕಿನ ಕಾಳಕೆಂಪನದೊಡ್ಡಿಯಲ್ಲಿ ಇಂದು ನೀರಿನ ತೊಂದರೆ ಕಾಣಿಸಿಕೊಂಡಿದ್ದು ಸ್ಥಳಕ್ಕೆ ಅಧಿಕಾರಿಗಳು ಹಾಗೂ ಅಂತಜ೯ಲ ತಜ್ಞರು ಬೇಟಿ ನೀಡಿ ಕ್ರಮ ಕೈಗೊಳುತ್ತಿದ್ದಾರೆ ಕುಡಿಯುವ ನೀರಿಗಾಗಿ ತಾಲ್ಲೂಕಿನಲೆಲ್ಲೂ ಆಹಾಕಾರ ಉಲ್ಬಣಿಸದ ಹಾಗೆ ಕ್ರಮ ಕೈಗೊಳ್ಳಲಾಗುತ್ತಿದೆ .



ಸಾವ೯ಜನಿಕರು ಮಾಡಬೇಕಾಗಿದ್ದೇನೇನು :-
1. ಅಗತ್ಯವಿದ್ದಾಗ ಮಾತ್ರ ನಲ್ಲಿಗಳನ್ನು ಬಳಸಬೇಕು ನೀರನ್ನು ಪೋಲು ಮಾಡಬಾರದು ನೀರಿನ ಮಹತ್ವ ಅರಿತು ಅಗತ್ಯವಾದ ನೀರನ್ನು ತೆಗೆದುಕೊಂಡ ನಂತರ ಅನಗತ್ಯವಾಗಿ ಪೋಲೂ ಮಾಡದೆ ನಲ್ಲಿಗಳನ್ನು ಬಂದ್ ಮಾಡಬೇಕು .
2. ಪ್ರತಿವಷ೯ ಅಂತಜ೯ಲದ ಮಟ್ಟ ಕುಸಿಯುತ್ತಿದ್ದು ಅಂತಜ೯ಲವನ್ನು ಅಭೀವೖದ್ದಿ ಪಡಿಸಲು ಮಳೆ ನೀರಿನ ಕೂಯ್ಲನ್ನು ಪ್ರತಿ ಮನೆಯಲ್ಲೂ ಅಳವಡಿಸಿಕೊಳ್ಳಬೇಕು .
3. ಕೈ ತೋಟಗಳಿಗೆ ಪುನರ್ ಬಳಕೆ ನೀರನ್ನು ಬಳಸಿಕೊಳ್ಳಬೇಕು ಅಲ್ಲದೇ ಅಂತಜ೯ಲವನ್ನು ದುರುಪಯೋಗ ಮಾಡದ ಹಾಗೆ ಕ್ರಮ ವಹಿಸಬೇಕು .
4. ವಾಡ್೯ಗಳಲ್ಲಿ ಅನಗತ್ಯವಾಗಿ ಪೋಲೀಗುತ್ತಿದ್ದ ನೀರಿನ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಜೀವ ಜಲವನ್ನು ಸಂರಕ್ಷಿಸಲು ಅಗತ್ಯವಿರುವ ಕ್ರಮಗಳನ್ನು ಅನುಸರಿಸಲು ಮುಂದಾಗಬೇಕು .
          ಬೇಸಿಗೆ ಕುಡಿಯುವ ನೀರಿನ ಹಾಹಾಕಾರದಿಂದಾಗಿ ಕಾಗೆಯೊಂದು ನಲ್ಲಿಯ ಮೇಲೆ ಕುಳಿತುನೀರು ಕುಡಿಯುತ್ತಿರುವುದು
                  
ಬೇಸಿಗೆಯ ಝಳಕ್ಕೆ ಕೆರೆ ಬತ್ತಿ ಕೆರೆಯ ಮಧ್ಯದ ಗುಂಡಿಯಲ್ಲಿ ಜಾನುವಾರುಗಳು ನೀರು ಕುಡಿಯುತ್ತಿರುವ ದೖಶ್ಯ .


Tuesday, 3 April 2012

ವಾಸುವಳ್ಳಿ ಬೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ


           ವಾಸುವಳ್ಳಿ ಬೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

ಮಳವಳ್ಳಿ,ಏ.3.

ಕನಾ೯ಟಕದಲ್ಲಿ ಜನತೆ ನೆಮ್ಮದಿ ಶಾಂತಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಸಹಬಾಳ್ವೆ ನಡೆಸುವಂತಾಗಲಿ ನಾಡಿನಲ್ಲಿ ಒಳ್ಳೆಯ ಮಳೆಯಾಗಿ ಸಮೖದ್ದಿಯ ಬೆಳೆಯಾಗಲಿ ರಾಜ್ಯದ ಆರೂವರೆ ಕೋಟಿ ಜನರಿಗೆ ಬೀರೇಶ್ವರ ಸ್ವಾಮಿ ಒಳ್ಳೆಯದನ್ನು ಉಂಟು ಮಾಡಲಿ ಎಂದು ವಿರೋದ ಪಕ್ಷದ ನಾಯಕ ರಾಜ್ಯದ ಕಾಂಗ್ರೇಸ್ ಹಿರಿಯ ಮುಖಂಡ ಸಿದ್ದರಾಮಯ್ಯ ಆಶಯ ವ್ಯಕ್ತಪಡಿಸಿದರು .

ತಾಲ್ಲೂಕಿನ ಬೆಳಕವಾಡಿ ಸಮೀಪದ ವಾಸುವಳ್ಳಿ ಗ್ರಾಮದಲ್ಲಿ 14 ವಷ೯ಗಳಿಗೊಮ್ಮೆ ನಡೆಯುವ ಶ್ರೀ ವಾಸುವಳ್ಳಿ ಬೀರೇಶ್ವರ ಸ್ವಾಮಿಯ ದೊಡ್ಡ ಹಬ್ಬದ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜ್ಯದ 123 ತಾಲ್ಲೂಕುಗಳಲ್ಲಿ ಬರಗಾಲವಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು ಅನೇಕ ಭಾಗಗಳಲ್ಲಿ ಕುಡಿಯುವ ನೀರಿಗೆ ಜನತೆ ತತ್ತರಿಸುವಂತಾಗಿದ್ದು ಇವರ ಭವಣೆಯನ್ನು ನೀಗಿಸಲು ಸಿದ್ದರಾಮೇಶ್ವರ ಹಾಗೂ ಬೀರೇಶ್ವರ ಎಲ್ಲರಿಗೂ ಒಳ್ಳೆಯದನ್ನೂ ಮಾಡಲಿ ಎಂದು ಆಶಿಸಿದರು .

ಶೋಷಿತ ವಗ೯ದವರೆಲ್ಲಾ ಆರಾಧಿಸುವುದು ಶೈವ ಪರಂಪರೆಯಾಗಿದ್ದು ನಾವೆಲ್ಲರೂ ಶೈವ ಪಂಥಕ್ಕೆ ಸೇರಿದವರಾಗಿದ್ದು ದೇವರೊಬ್ಬನೆ ಹಾಗೂ ನಾಮ ಹಲವು ಭಕ್ತಿಯಿಂದ ಎಲ್ಲರು ನಮನ ಸಲ್ಲಿಸಬೇಕು ಎಂದ ಅವರು ಸಾವಿರಾರು ಜನ ಬಂದಿದ್ದೀರಿ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದೆ ಶಾಂತಿಯಿಂದ ದೇವರ ದಶ೯ನ ಮಾಡಿ ತಮ್ಮ ಸ್ವಸ್ಥಳಕ್ಕೆ ತೆರಳಬೇಕೆಂದು ತಿಳಿಸಿದರು .

ನಾನು ಎಂಬ ಅಹಂ ಬಿಟ್ಟಾಗ ದೇವರನ್ನು ಒಲಿಸಿಕೊಳ್ಳಲು ಸಾಧ್ಯ ಅಹಂ ಬಿಟ್ಟಾಗ ಮಾತ್ರ ದೇವರು ಅನುಗ್ರಹ ತೋರುತ್ತಾನೆ ದೇವರ ಪ್ರೀತಿಯೊಂದಿಗೆ ನಿಮ್ಮ ಆಶೀವಾ೯ದ ನಮ್ಮ ಮೇಲಿರಲಿ ಎಂದು ಮನವಿ ಮಾಡಿದ ಅವರು ನಿಮ್ಮ ಪ್ರೋತ್ಸಾಹ ಪ್ರೀತಿ ವಿಶ್ವಾಸ ಆಶೀವಾ೯ದ ನನ್ನ ಮೇಲಿದ್ದರೆ ಯಾವ ಹೋರಾಟಕ್ಕೆ ಸಿದ್ದನಾಗಿ ನಿಮ್ಮ ಮುಂಚೂಣಿಯ ಮುಖಂಡತ್ವ ವಹಿಸಿಲು ಬದ್ಧನಾಗಿರುತ್ತೇನೆ ಎಂದರು .

ಮಾಜಿ ಸಚಿವ ಶಾಸಕ ಪಿ.ಎಂ ನರೇಂದ್ರಸ್ವಾಮಿ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸಮಾಜದ ದೀನ ದಲಿತರ ಹಿಂದುಳಿದ ನಾಯಕರಾದ ಮಾಜಿ ಉಪಮುಖ್ಯಮಂತ್ರಿ ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯನವರು ಈ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುವ ಅವಕಾಶ ಸಿಗಲಿ ಈ ಅವಕಾಶಕ್ಕಾಗಿ ತಾವೆಲ್ಲರೂ ಬೆಂಬಲಿಸಿ ಎಂದು ಮನವಿ ಮಾಡಿದರು .

ಕೆಪಿಸಿಸಿ ಮುಖಂಡ ದಡದಪುರ ಶಿವಣ್ಣ ಮಾತನಾಡಿ ದಿವಂಗತ ದೇವಾರಜುಅರಸ್ ರವರ ನಂತರ ಹಿಂದುಳಿದ ನಾಯಕರಾಗಿ ಸಿದ್ದರಾಮಯ್ಯ ಹೊರಹೊಮ್ಮಿದ್ದು ಇವರಿಗೆ ಈ ರಾಜ್ಯದ ಮುಖ್ಯಮಂತ್ರಿಯನ್ನಾಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಈ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯನಿವ೯ಹಿಸಿ ಬೆಂಬಲ ನೀಡೋಣ ಎಂದು ತಿಳಿಸಿದರು .

ವೇದಿಕೆಯಲ್ಲಿ ಮಾಜಿ ಶಾಸಕ ಡಾ|| ಕೆ.ಅನ್ನಧಾನಿ , ಬಿಜೆಪಿ ಮುಖಂಡ ಮುನಿರಾಜ್ , ಆದಶ೯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ|| ಮೂತಿ೯ , ಕೆಪಿಸಿಸಿ ಸದಸ್ಯರುಗಳಾದ ಸುರೇಶ್ , ಜಯಣ್ಣ , ಯಮದೂರು ಸಿದ್ದರಾಜ್ , ಕಾಂಗ್ರೇಸ್ ಮುಖಂಡ ಕೆಂಪರಾಜು , ಸಮಾಜದ ಹಿರಿಯ ಮುಖಂಡ ಸಿದ್ದೇಗೌಡ , ಪ್ರಭಾರ ತಾ.ಪಂ ಅಧ್ಯಕ್ಷ ಚಿಕ್ಕಲಿಂಗಯ್ಯ , ಜಿ.ಪಂ ಸದಸ್ಯೆ ಶಿವಮ್ಮ , ಗ್ರಾ.ಪಂ ಸದಸ್ಯರುಗಳಾದ ಚಿಕ್ಕಮ್ಮ , ಗುರುಸ್ವಾಮಿ , ಜಯರಾಜು , ಲಿಂಗರಾಜು ಸೇರಿದಂತೆ ಸಹಸ್ರಾರು ಭಕ್ತಾದಿಗಳು ಹಾಗೂ ಸಿದ್ದರಾಮಯ್ಯ ನವರ ಅಭಿಮಾನಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು .
------------------------------------------------------------------------------------------------------------


                                       ವಿಶೇಷ ವರದಿ :- ಎಂ.ಡಿ. ಉಮೇಶ್ ಮಳವಳ್ಳಿ

ಇತಿಹಾಸ ಪ್ರಸಿದ್ದ ವಾಸುವಳ್ಳಿ ಬೀರೇಶ್ವರ ದೇವರ ವೈಭವದ ದೊಡ್ಡ ಹಬ್ಬದ ಜಾತ್ರೆ 10 ಕೂಟಗಳ ಏಳುಮಡಿ ಉತ್ಸವ ಇಂದು ಆರತಿ ಮತ್ತು ಕೂಟಗಳು ಸೇಪ೯ಡೆಗೊಂಡು ಶ್ರದ್ದೆ ಭಕ್ತಿಯಿಂದ ಬೀರೇಶ್ವರನ ಕೖಪೆಗೆ ಪಾತ್ರರಾದರು .

ಜಾತ್ರೆಯಲ್ಲಿ ಮಾರೇಹಳ್ಳಿ ಬೀರೇಶ್ವರ , ಚಂದಹಳ್ಳಿ ಬೀರೇಶ್ವರ , ವಾಸುವಳ್ಳಿ ಬೀರೇಶ್ವರ , ಅಗಸನಪುರ ಬೀರೇಶ್ವರ , ಹೊನ್ನೂರು ಬೀರೇಶ್ವರ , ತಲಕಾಡು ಬೀರೇಶ್ವರ, ಪುರಿಗಾಲಿ ಬೀರೇಶ್ವರ,ಕಾಳಿಹುಂಡಿ ಬಲಮಾಂಕಾಳಿ,ಸಿದ್ದರಾಮೇಶ್ವರ ಸ್ವಾಮಿ , ಬೀರೇಶ್ವರಸ್ವಾಮಿ ,  ಶ್ರೀ ಹೊನ್ನೂರು ಬೀರೇಶ್ವರಸ್ವಾಮಿ , ಶ್ರೀ ಕೋಮಾರನಪುರದ ಬೀರೇಶ್ವರಸ್ವಾಮಿ ಪ್ರತಿ 13-14 ವರ್ಷಗಳಿಗೊಮ್ಮೆ ನಡೆಯುವ ವೈಭವದ ಕೂಟಗಳ ಜಾತ್ರೆ ವಾರದ ವಿಶಿಷ್ಟ ಸೋಮವಾರದಂದು ಕೂಟಗಳು ಸೇರಿಕೊಂಡು  ಮಂಗಳವಾರ ದೇವರ ಪ್ರಸಾದದ ಕೂಟದೊಂದಿಗೆ ವೈವಿದ್ಯಮಯ ಪಟ್ಟದ ದೇವರ ಕುಣಿತಗಳು ಬುಧುವಾರ ತೆರೆಕಾಣುವ ಈ ದೊಡ್ಡಹಬ್ಬದ ಜಾತ್ರೆಯಲ್ಲಿ ಅನ್ನ ಸಂತಪ೯ಣೆ ಕಾಯ೯ಮುಗಿದ ಮರುಗಳಿಗೆಯಲ್ಲಿ  ಪವಾಡ ಸಂದೖಶದಲ್ಲಿ ಭಕ್ತಾಧಿಗಳ ಬೇಡಿಕೆಗಳು ಈಡೇರಿಕೆಗಳಾಗುವುದೆಂಬ ಪ್ರತಿತಿ ಇದೆ .

ಸೋಮವಾರ ಪ್ರರಂಭವಾದ ಉತ್ಸವದಲ್ಲಿ ಪಂಜಿನ ಸೇವೆ ಹಾಗೂ ಏಳುಮಡಿವೊಡ್ಡಿ  ದೇವರನ್ನು ಕರೆತಂದು ಧಾಮಿ೯ಕ ವಿಧಿವಿದಾನಗಳೊಂದಿಗೆ ಪೂಜೆಸಲ್ಲಿಸಿ ನಂದಿಕಂಬ , ಪಟ್ಟದಕುಣಿತ , ವೀರಕುಣಿತ , ಹಾಲುಮಕ್ಕಳ ಕುಣಿತ , ಕಂಸಾಳೆ ಕುಣಿತ ಸೇರಿದಂತೆ ಬೀರ ದೇವರುಗಳ ವಿವಿಧ ಭಂಗಿಯ ಕುಣಿತಗಳು ನಡೆದು ವಾಸುವಳ್ಳಿ ಗ್ರಾಮಸ್ಥರು ಕೊಂಡಕ್ಕೆ ಸೌದೆಯನ್ನು ಜೋಡಿಸಿ ರಾತ್ರಿಯೆಲ್ಲಾ ದೇವರ ಕೂಟಗಳು ಬೆಳಕವಾಡಿ ಕಾವೇರಿ ನದಿ ತೀರದಲ್ಲಿ ತಾನಗಟ್ಟದಿಂದ ತಮಟೆ ನಗಾರಿ ಬಸವಗಳು ಹಾಗೂ ಕೊಂಬು ಕಹಳೆಯೊಂದಿಗೆ ಎಲ್ಲ ಗಡಿಯ ಯಜಮಾನರು ಬೆಳಕವಾಡಿ ನಾಡಗೌಡ ಸಮಾಜ ಮುಖಂಡರೊಡನೆ ರಾಜಬೀದಿಯಲ್ಲಿ ಎಲ್ಲಾ ಜನಾಂಗದ ಮುಖಂಡರೊಡನೆ ಏಳು ಮಡಿಯೊಂದಿಗೆ ಸಾಗಿ ಬಂದು ರಾತ್ರಿ ಕೊಂಡೋತ್ಸವ ಜರುಗಿತು  ಹಾಗೂ 10 ಕೂಟಗಳ ಯಜಮಾನರುಗಳು,ಹೆಗ್ಗಡೆಗಳು ಸೇರಿದಂತೆ ಕರಿಯ ಕಂಬಳಿಯನ್ನು ಹೊದ್ದಿಕೊಂಡು ಹಳುಮಕ್ಕಳು ದೇವರನ್ನು ಜಪಿಸುತ್ತ  ವೈಭವದ ಪೂಜೆಗಳಿಗೆ ಚಾಲನೆ ನೀಡುತ್ತಾರೆ.

ಮಂಗಳವಾರ ಮಜ್ಜನ ತರುವುದು ವೀರ ಮಕ್ಕಳ ರಂಗ ಕುಣಿತ ಕಾರ್ಯಕ್ರಮಗಳು ನೆರವೇರಿದವು ಬುಧವಾರ ಹೆಗ್ಗಡೆ ಮೇಲೆ ಆರತಿ ಹಾಗೂ ಎಲ್ಲಾ ಗಡಿಗಳ ಕಾರರು ಸಕ್ಕರೆ ವಿಳ್ಯೇದೊಡನೆ ವಾದ್ಯ ಸಮೇತ ಬೀಳ್ಕೊಡಲಾಯಿತು  .

ಕುರುಬರ ಕುಲದ ಡೊಳ್ಳುಕುಣಿತ ಕುರುಬರ ವಿಶಿಷ್ಟ ಕಲೆಯಾಗಿದ್ದು ಕುರುಬ ಗೌಡರು ಹಾಗೂ ಹೆಗ್ಗಡೆಗಳು ಡೊಳ್ಳಿನ ತಾಳಗಳಿಗೆ ಹೆಜ್ಜೆಹಾಕುತ್ತ ಹಾಲುಮತ ಪುರಾಣ ಹಾಗೂ ಕುರುಬ ಪುರಾಣವನ್ನ ಡೊಳ್ಳಿನ ನಾದದೊಂದಿಗೆ ನೆರೆದಿದ್ದ ಭಕ್ತ ಸಾಗರಕ್ಕೆ ಪುರಾಣದ ಉಲ್ಲೇಖಗಳನ್ನ ಸಾರುತ್ತ ಮೈನವಿರೇರಿಸುವ ದೖಶ್ಯ ಸಾಮಾನ್ಯವಾಗಿತ್ತು.

ಇದಕ್ಕಾಗಿ ಸೋಮವಾರ ಮಧ್ಯಾಹ್ನದಿಂದಲೇ ಕಮಾನು ಕಟ್ಟಿದ ನೂರಾರು ಎತ್ತಿನಗಾಡಿಗಳು ಸೇರಿದಂತೆ ವಿವಿಧ ವಾಹನಗಳ ಮೂಲಕ ಜನರು ಬಂದು ದೇವಸ್ಥಾನದ ಆವರಣಗಳಲ್ಲಿ ಬೀಡುಬಿಟ್ಟು ಕೂಠಿರಗಳನ್ನು ನಿಮಿ೯ಸಿ ಕೊಂಡು ದೇವರ ದಶ೯ನಕ್ಕಾಗಿ ಹೆಡಿಗೆ ಹೊತ್ತು ತಂದು ಪೂಜೆಸಲ್ಲಿಸಿದರು

ದೇವಾಲಯದವರೆಗೂ 25 ಸಾವಿರಕ್ಕೂ ಹೆಚ್ಚು  ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು ವಿಶೇಷವಾಗಿದ್ದು ಜಿಲ್ಲೆಯ ವಿವಿದೇಡೆಗಳಿದ್ದಲ್ಲದೆ ರಾಜ್ಯದ ಹಲವು ಭಾಗಗಳಿಂದಲ್ಲದೆ ನೇರರಾಜ್ಯ ಆಂದ್ರ ಮತ್ತು ತಮಿಳು ನಾಡು  ಭಕ್ತ ಸಾಗರವೆ ಹರಿದು ಬಂದಿತ್ತು .

ವಿವಿಧ ದಾಮಿ೯ಕ ಮುಖಂಡರುಗಳು ಸೇರಿದಂತೆ ಕುರುಬ ಕುಲದ ಯಜಮಾನರು , ದೇವರ ಹೆಗ್ಗಡೆಗಳು ಮಾಜಿ ಉಪಮುಖ್ಯಮಂತ್ರಿ ಹಾಗೂ ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕ ಡಾ.ಕೆ ಅನ್ನದಾನಿ,ಬಿಜೆಪಿ ಮುಖಂಡ ಮುನಿರಾಜ್, ಆದರ್ಶ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಡಾ.ಮೂರ್ತಿ ಇತರ ಗಣ್ಯರು ಪೂಜೆ ಸಲ್ಲಿಸಿ ನೆರೆದಿದ್ದ ಭಕ್ತ ಸಾಗರಕ್ಕೆ ಶುಭ ಕೋರಿದರು .           
       

ವಾಸುವಳ್ಳಿ ಬೀರೇಶ್ವರ ಜಾತ್ರಾ ಮಹೋತ್ಸವ

                         ವಾಸುವಳ್ಳಿ ಬೀರೇಶ್ವರ ಜಾತ್ರಾ ಮಹೋತ್ಸವ                                     



Monday, 2 April 2012

SAKALA MAHITI KENDRA INAGURATION PHOTO


 
ಸಕಾಲ ಮಾಹಿತಿ ಕೇಂದ್ರ ಉದ್ಘಾಟನಾ ಕಾರ್ಯಕ್ರಮ
     


MILIRTARY PICTURES

ಸೇನೆಯ ಚಿತ್ರಗಳು 



Sunday, 1 April 2012

computer training program

   ಕಂಪ್ಯೂಟರ್ ಶಿಕ್ಷಣ ತರಬೇತಿ ಸಮಾರೋಪ ಸಮಾರಂಬ        





Thursday, 16 February 2012

revenu dep ingured D c interview

ingured-revenu-dep-employes-at malavalli hospital
D C & SP visit at hospital
PMN at malavalli hospital